Latest

ಸಾಹಿತಿ ಭಾಗೀರಥಿ ಹೆಗಡೆಗೆ ಪ್ರತಿಷ್ಠಿತ ಸರಳಾ ರಂಗನಾಥರಾವ್ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ; ಶಿರಸಿ: ನಾಡಿನ ಹೆಸರಾಂತ ಸಾಹಿತಿ ಭಾಗೀರಥಿ ಹೆಗಡೆ ಅವರಿಗೆ ಬೆಂಗಳೂರಿನ ಸರಳಾ ರಂಗನಾಥರಾವ್ ಸ್ಮಾರಕ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಸರಳಾ ರಂಗನಾಥರಾವ್ ಪ್ರಶಸ್ತಿ ಪ್ರಕಟವಾಗಿದೆ.

ಭಾಗೀರಥಿ ಹೆಗಡೆ ಅವರು ಸಾಹಿತ್ಯ ಕ್ಷೇತ್ರಕ್ಕೆ ಈಗಾಗಲೇ ಅನುಪಮ ಕೊಡುಗೆ ನೀಡಿದ್ದು, ಅವರ‌ ಕಾಲಾಂತರ ಕಾದಂಬರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಎಚ್.ಎಸ್.ವೆಂಕಟೇಶಮೂರ್ತಿ, ಎಲ್.ಜಿ.ಮೀರಾ, ಜಿ.ಎನ್. ರಂಗನಾಥರಾವ್ ಅವರನ್ನೊಳಗೊಂಡ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದೆ. ಬರಲಿರುವ ಜನವರಿಯಲ್ಲಿ ನೀಡಲಾಗುವ ಈ ಪ್ರಶಸ್ತಿಯು ಫಲಕ, ಸ್ಮರಣಿಕೆ ಜೊತೆ ಹತ್ತು ಸಾವಿರ ರೂ.ಒಳಗೊಂಡಿದೆ.

ಭಾಗೀರಥಿ ಹೆಗಡೆ ಅವರಿಗೆ ರಾಜ್ಯ ಸರಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ, ಗದಗಿನ ಪುಟ್ಟರಾಜ ಸೇವಾ ಸಮಿತಿ‌ ಪ್ರಶಸ್ತಿ, ಸಾಹಿತ್ಯ‌ಪರಿಷತ್ ನೀಡುವ ಲಕ್ಷ್ಮೀದೇವಿ‌ ಶಾಂತರಸ‌ ಪ್ರಶಸ್ತಿ, ಶಾಂತಾದೇವಿ‌ ಕಣವಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಕಾವ್ಯ, ಕಾದಂಬರಿ, ಕಥಾ, ನಾಟಕ, ನಗೆ ಬರಹ ಸೇರಿದಂತೆ ಸಾಹಿತ್ಯದ ಅನೇಕ‌ ಪ್ರಕಾರಗಳಲ್ಲಿ ಹೆಸರು ಗಳಿಸಿದ ಭಾಗೀರಥಿ ಹೆಗಡೆ ಅವರಿಂದ ಈಗಾಗಲೇ ಹದಿನೆಂಟು ಕೃತಿಗಳು ಪ್ರಕಟವಾಗಿದೆ. ಜಿಲ್ಲಾ ಸಾಹಿತ್ಯ‌ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ಕೂಡ ಅರಸಿ ಬಂದಿದ್ದು ಉಲ್ಲೇಖನೀಯ.

ಇದರಲ್ಲಿ ಚರ್ಚೆ ಮಾಡುವುದೇನಿದೆ? – ಸತೀಶ್ ಜಾರಕಿಹೊಳಿಗೆ ಮಾರುತ್ತರ ನೀಡಿದ CM

https://pragati.taskdun.com/politics/what-is-there-to-discuss-cm-gave-a-reply-to-the-satish-jarakiholi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button