ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಚಿತ್ರದ ಬೃಹತ್ ಶೂಟಿಂಗ್ ಸೆಟ್ ನಲ್ಲಿ ಮತ್ತೆ ಬೆಂಕಿ ಅವಘಡ ಸಂಭವಸಿದ್ದು, ಸೆಟ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನೆಲಮಂಗಲದ ಬಳಿಯ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಭಜಾರಂಗಿ-2 ಚಿತ್ರದ ಚಿತ್ರೀಕರಣಾಕ್ಕಾಅಗಿ ಗುಹೆ ಆಕಾರಾದ ಬೃಹತ್ ಸೆಟ್ ನಿರ್ಮಿಸಲಾಗಿತ್ತು. ಚಿತ್ರೀಕರಣದಲ್ಲಿ ನಟ ಶಿವರಾಜ್ ಕುಮಾರ್ ಸೇರಿದಾಂತೆ 400ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಫಾಇಟಿಂಗ್ ದೃಶ್ಯದಾ ಚಿತ್ರೀಕಾರಣದ ವೇಳೆ ಶಾಅರ್ಟ್ ಸಂಕ್ಯೂಟ್ ಸಂಭವಿಸಿ, ಈ ಅವಾಘಡ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಾಂಭವಿಸಿಲ್ಲ.
ತಕ್ಷಣ ಎಚ್ಚತ್ತ ಚಿತ್ರತಂಡ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಕಲಾವಿದರು ಹಾಗೂ ತಂತ್ರಜ್ನರನ್ನು ಸೆಟ್ ನಿಂದ ಹೊರಗೆ ಕಳುಹಿಸಿದೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಬಗ್ಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ಸ್ಟಂಟ್ ಶೂಟಿಂಗ್ ಮಾಡುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಎಲ್ಲಾ ಕಾಲಾವಿದರು ಹಾಗೂ ಜನರನ್ನು ಹೊರಗೆ ಕಳುಹಿಸಲಾಗಿದೆ. ದೇವರ ದಯೆಯಿಂದ ಯಾರಿಗೂ ಯಾವುದೇ ತೊಂದರೆ, ಅಪಾಯಗಳು ಸಂಭವಿಸಿಲ್ಲ. ಆದರೆ ಅದ್ದೂರಿಯಾಗಿ ಹಾಕಲಾಗಿದ್ದ ಸೆಟ್ ಬೆಂಕಿಗಾಹುತಿಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಜ.16ರಂದು ಕೂಡ ಭಜರಂಗಿ-2 ಚಿತ್ರದ ಸೆಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಆವಘದಾ ಸಂಭವಿಸಿತ್ತು. ಬಳಿಕ ಜ.18ರಂದು ನೆಲಮಂಗದ ಬಳಿ ಕಾಲಾವಿದರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿತ್ತು. ಇದೀಗ ಮತ್ತೆ ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಘಟನೆಯಲ್ಲೂ ಯಾರಿಗೂ ಪ್ರಾಣಾಪಾಯಗಳು ಸಂಭವಿಸಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ