ಭಾರತದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಪಾದಯಾತ್ರೆ
ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ – ಭಾರತ್ ಜೋಡೋ ಯಾತ್ರೆಯು 7 ಸೆಪ್ಟೆಂಬರ್ 2022 ರಂದು ಭಾರತೀಯ ಉಪಖಂಡದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಪ್ರಾರಂಭವಾದ ನಂತರ ಶನಿವಾರ 1000 ಕಿಲೋಮೀಟರ್ಗಳ ಮೈಲಿಗಲ್ಲನ್ನು ತಲುಪಲಿದೆ.
3500 ಕಿಲೋಮೀಟರ್ ಯಾತ್ರೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಐತಿಹಾಸಿಕ ಘಟನೆಯಾಗಿದೆ. ಇದು ಭಾರತದ ಇತಿಹಾಸದಲ್ಲಿ ಯಾವುದೇ ಭಾರತೀಯರು ಕಾಲ್ನಡಿಗೆಯಲ್ಲಿ ನಡೆಸಿದ ಅತಿ ಉದ್ದದ ಮೆರವಣಿಗೆಯಾಗಿದೆ.
ಮಹಾತ್ಮ ಗಾಂಧಿಯವರ ದಂಡಿ ಮೆರವಣಿಗೆಯು ಗುಜರಾತ್ ರಾಜ್ಯದ ಸಬರಮತಿ ಆಶ್ರಮದ ದಂಡಿ (ನವಸರಿ) ನಡುವೆ ಕಾಲ್ನಡಿಗೆಯಲ್ಲಿ (24 ದಿನಗಳಲ್ಲಿ 389 ಕಿಲೋಮೀಟರ್) ಉದ್ದದ ಮೆರವಣಿಗೆಯಾಗಿತ್ತು.
ಭಾರತ್ ಜೋಡೋ ಯಾತ್ರೆಯು ಆಂಧ್ರಪ್ರದೇಶವನ್ನು ಪ್ರವೇಶಿಸುವ ಮೊದಲು ಬಳ್ಳಾರಿ ಜಿಲ್ಲೆಯ ಹೊರವಲಯಕ್ಕೆ ಬಂದಾಗ ಈ ಮೈಲಿಗಲ್ಲು (1000 ಕಿಲೋಮೀಟರ್) ತಲುಪುತ್ತದೆ.
ಶಾಸಕರು, ಎಂಎಲ್ಸಿ, ಬ್ಲಾಕ್ ಮತ್ತು ಜಿಲ್ಲಾ ಐಎನ್ಸಿ ಸಮಿತಿಗಳು, ಕಾರ್ಯಕರ್ತರು, ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡ ಅನೇಕರು ಮಾರ್ಗಮಧ್ಯದಲ್ಲಿ ರಾಹುಲ್ ಗಾಂಧಿ ಪ್ರದರ್ಶಿಸಿದ ಶಕ್ತಿಗೆ ಬೆರಗಾದರು. 1000 ಕಿಲೋಮೀಟರ್ಗಳಲ್ಲಿ ಅವರು ಅನುಸರಿಸಿದ ದಿನಚರಿಯು ಪಾದಯಾತ್ರಿಗಳನ್ನು ಪ್ರೇರೇಪಿಸಿದೆ.
20 ನಿಮಿಷಗಳ ವ್ಯಾಯಾಮ, ಬೆಳಿಗ್ಗೆ ಲಘು ಉಪಹಾರ ಮತ್ತು ದಿನವಿಡೀ 25 ಕಿಲೋಮೀಟರ್ ಬಿಸಿ ಡಾಂಬರ್ ನೆಲದ ಮೇಲೆ ನಡೆದರು ಹಾಗೂ ಕೆಲವೊಮ್ಮೆ ಬಿಸಿಲು ಮತ್ತು ತುಂತುರು ಮಳೆಯನ್ನು ಎದುರಿಸಿ ಅವರು ಮೂರು ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಕರ್ನಾಟಕದಾದ್ಯಂತ ಪ್ರಯಾಣಿಸಿದರು.
ಆಯೋಜಕರಿಗೆ ಅಚ್ಚರಿ ಮೂಡಿಸಿದ್ದು, ಕಾಲ್ನಡಿಗೆಯಲ್ಲಿ ಐತಿಹಾಸಿಕ ಪಯಣದಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಜನ ಸಾಮಾನ್ಯ ವರ್ಗದ ಜನರು. ತಮಿಳುನಾಡಿನಲ್ಲಿ ಲಕ್ಷಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕೇರಳದಲ್ಲಿ ಇದು 1.25 ಲಕ್ಷ ಜನ ರಾಹುಲ್ ಜೊತೆ ಹೆಜ್ಜೆಹಾಕಿದ್ರು. ಮತ್ತು ಕರ್ನಾಟಕದಲ್ಲಿ ಶುಕ್ರವಾರದವರೆಗೆ ಇದು 1.50 ಲಕ್ಷ ಜನರು ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ರು. ಯಾತ್ರೆ ಆಂಧ್ರಪ್ರದೇಶವನ್ನು ಪ್ರವೇಶಿಸಿದಾಗ 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.
ತಮ್ಮ ಭಾರತ್ ಜೋಡೋ ಯಾತ್ರೆಯ ಭಾಗವಾಗಿ, ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬದನವಾಳು ಗ್ರಾಮದ ಹಿಂದುಳಿದ ಪ್ರದೇಶಗಳಲ್ಲಿ ಪಾದಯಾತ್ರೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ಹಳ್ಳಿಯ ದಲಿತ ಕಾಲೋನಿಯನ್ನು ಲಿಂಗಾಯತ ಸಮುದಾಯದೊಂದಿಗೆ ಸಂಪರ್ಕಿಸುವ ವರ್ಣರಂಜಿತ ಇಂಟೆರ್ ಲಾಕ್ ಟೈಲ್ಸ್ ನ ಪಥವನ್ನು ಉದ್ಘಾಟಿಸಿದರು. ‘ಭಾರತ್ ಜೋಡೋ’ ರಸ್ತೆ ಎಂದು ಹೆಸರಿಸಲಾದ ಈ ಮಾರ್ಗವನ್ನು 48 ಗಂಟೆಗಳ ಅವಧಿಯಲ್ಲಿ ನವೀಕರಿಸಲಾಗಿದೆ. ಇದು ಎರಡು ಸಮುದಾಯಗಳ ನಡುವೆ ಸಾಮರಸ್ಯದ ಸಂದೇಶವನ್ನು ಕಳುಹಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಗಾಂಧಿಯವರು ಗುಲಾಬಿ ಮತ್ತು ನೀಲಿ ಬಣ್ಣದ ಕೆಲವು ಟೈಲ್ಸ್ ಗಳನ್ನು ಸ್ವತಃ ಹಾಕಿದರು. ಹೀಗೆ ಸುಮಾರು ಮೂರು ದಶಕಗಳ ಹಿಂದೆ ಹಿಂಸಾತ್ಮಕ ಸಂದರ್ಭಗಳಲ್ಲಿ ಕಡಿತಗೊಂಡ ಲಿಂಕ್ ಅನ್ನು ಪುನಃ ಜೋಡಿಸಲಾಯ್ತು.
ಕರ್ನಾಟಕದ ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ಅವರು ಬಂಜಾರ, ದಕ್ಕಲಿಗ, ಸುಡುಗಾಡು ಸಿದ್ಧ, ಡೊಂಬಾರು, ದೊಂಬಿದಾಸ ಸಮುದಾಯದ ಹಲವಾರು ಬುಡಕಟ್ಟು ಸಮುದಾಯದ ಮಹಿಳೆಯರನ್ನು ಭೇಟಿ ಮಾಡಿ ಅವರ ಜೀವನವನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯಂತಹ ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ನಾಯಕರೊಬ್ಬರು ಭೇಟಿ ನೀಡಿದ್ದು ಇದೇ ಮೊದಲು. ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು ಮತ್ತು ಅವರು ಗೌರವಾರ್ಥವಾಗಿ ನೃತ್ಯವನ್ನು ಪ್ರಸ್ತುತಪಡಿಸಿದರು ಮತ್ತು ಆರತಿ ಮಾಡುವ ಮೂಲಕ ಅವರನ್ನು ಸ್ವಾಗತಿಸಿದರು.
ಸಂಸದರಾಗಿ ತಮ್ಮ ಜೀವನದ ವಿವಿಧ ಹಂತಗಳಲ್ಲಿ ನಿರುದ್ಯೋಗಿ ಯುವಕರ ಬಗ್ಗೆ ಆಳವಾದ ಕಾಳಜಿಯನ್ನು ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಅವರು ಕರ್ನಾಟಕದಾದ್ಯಂತ 2000 ಕ್ಕೂ ಹೆಚ್ಚು ನಿರುದ್ಯೋಗಿ ಯುವಕರೊಂದಿಗೆ ಸಂವಾದ ನಡೆಸಲು ನಿರ್ಧರಿಸಿದ್ದರು. ಅವರು ಅವರನ್ನು ಭೇಟಿ ಮಾಡಿದರು ಮತ್ತು ಅವರ ಸಾಮರ್ಥ್ಯಗಳು ಮತ್ತು ಕೌಶಲ್ಯಗಳು ಮತ್ತು ಅವರ ನಿರುದ್ಯೋಗದ ಕಾರಣಗಳನ್ನು ತಿಳಿದುಕೊಂಡರು. ಮತ್ತು ಅವರು ತಮ್ಮ ಜೀವನವನ್ನು ಹೇಗೆ ನಡೆಸಿದರು ಹಾಗೂ ಅವರ ಕುಟುಂಬಗಳನ್ನು ಹೇಗೆ ಸಂಭಾಳಿಸಿದರು ಎಂದು ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. ಈ ಕಾರ್ಯಕ್ರಮ ಚಿತ್ರದುರ್ಗ ಜಿಲ್ಲೆಯ ಚೆಳ್ಳಕೆರೆಯಲ್ಲಿ ನಡೆದಿತ್ತು.
ವಿವಿಧ ಹಂತಗಳಲ್ಲಿ ಲಕ್ಷಾಂತರ ಜನರು ಯಾತ್ರೆಗೆ ಸೇರಿದ್ದರೂ, ಬೆಳಿಗ್ಗೆ 7 ರಿಂದ 11 ರವರೆಗೆ ಮತ್ತು ಸಂಜೆ 4 ರಿಂದ 7 ರವರೆಗೆ ಎರಡು ಅವಧಿಗಳಲ್ಲಿ ಯಾತ್ರೆಯನ್ನು ನಿಗದಿಪಡಿಸಲಾಯಿತು ಮತ್ತು ಮಧ್ಯಂತರ ಅವಧಿಯಲ್ಲಿ ರಾಹುಲ್ ಅವರು ಸಾಮಾನ್ಯ ವರ್ಗದ ಜನರನ್ನು ಭೇಟಿಯಾಗಲು ನಿಗದಿಪಡಿಸಿಕೊಂಡಿದ್ದರು. ರೈತರು, ಮೀನುಗಾರರು ( ಒಳನಾಡು ಮತ್ತು ಸಾಗರ ಎರಡೂ) ನಿರ್ಮಾಣ ಕಾರ್ಮಿಕರು, ಶಿಕ್ಷಕರು, ಗ್ರಾಮ ಮಟ್ಟದ ನಾಯಕರು ಮತ್ತು ಭಾರತ್ ಜೋಡೋ ಯಾತ್ರೆಯ ವಿವಿಧ ಹಂತಗಳಲ್ಲಿ ಕೆಲವು ಪ್ರಮುಖ ವ್ಯಕ್ತಿಗಳು, ಬರಹಗಾರರು ವಿದ್ವಾಂಸರು ಮತ್ತು ಬುದ್ಧಿಜೀವಿಗಳನ್ನು ಭೇಟಿಯಾದರು. ಅವರ ದಿನಚರಿಯು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿ ರಾತ್ರಿ 11 ಗಂಟೆಗೆ ಕೊನೆಗೊಂಡಿತು.
ಹಲವು ಹಂತದ ಒಟ್ಟು 3750 ಕಿಲೋಮೀಟರ್ಗಳ ಭಾರತ್ ಜೋಡೋ ಯಾತ್ರೆಯು ಮೊದಲ 1000 ಕಿಲೋಮೀಟರ್ಗಳಲ್ಲಿ ತನ್ನ ಉದ್ದೇಶವನ್ನು ಸಾಧಿಸಿದೆ. ಭಾರತ ದೇಶವು ಎಷ್ಟು ವೈವಿಧ್ಯಮಯವಾಗಿದೆ ಎಂಬುದನ್ನು ಯಾತ್ರೆಯು ಸಮರ್ಪಕವಾಗಿ ವಿವರಿಸಿದೆ. ಜಾತಿ, ಧರ್ಮ, ಭಾಷೆ, ಪ್ರದೇಶಗಳು ಮತ್ತು ಸಂಸ್ಕೃತಿಗಳ ಅಡೆತಡೆಗಳನ್ನು ಮೀರಿ ದೇಶವನ್ನು ಒಂದಾಗಿ ನೋಡಬಹುದು.
ರಾಹುಲ್ ಅವರು ತಮ್ಮ ಯಾತ್ರಾ ವ್ಯವಸ್ಥಾಪಕರಿಗೆ ನಿಜವಾದ ಭಾರತ ಮತ್ತು ಜನರನ್ನು ನೋಡುವ ರೀತಿಯಲ್ಲಿ ಯಾತ್ರೆಯನ್ನು ನಡೆಸುವಂತೆ ಹೇಳಿದ್ದರು. ಇದುವರೆಗೆ ಸಮಾಜದ ಸಂಪೂರ್ಣ ವರ್ಗವನ್ನು ಭೇಟಿಯಾದ ನಂತರ, ರಾಹುಲ್ ಅವರ ನಿಕಟ ವಲಯ ಯಾತ್ರೆಯ ಉದ್ದೇಶ ಸಂಪೂರ್ಣ ಸಾಕಾರಗೊಂಡಿದೆ ಎಂದು ಭಾವಿಸಿದ್ದಾರೆ. ಇಲ್ಲಿಂದ (1000 ಕಿಲೋಮೀಟರ್ಗಳ ನಂತರ) ಯಾತ್ರೆಯು ಕಷ್ಟಕರವಾದ ಭೂಪ್ರದೇಶಗಳ ಹವಾಮಾನ ವೈಪರಿತ್ಯ ಮತ್ತು ಹೊಸ ಸವಾಲುಗಳ ಜೊತೆ ಹಾದುಹೋಗಲಿದೆ.
https://pragati.taskdun.com/politics/thousands-of-workers-from-belgaum-rural-area-for-bharat-jodo-padayatra/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ