Cancer Hospital 2
Beereshwara 36
LaxmiTai 5

*ಭರತೇಶ ಶಿಕ್ಷಣ ಸಂಸ್ಥೆಯ ವತಿಯಿಂದ ಕುಡುಚಿಯ ಚಂದ್ರಗಿರಿ ಕ್ಯಾಂಪಸ್ ನಲ್ಲಿ ಇಂಜನಿಯರಿಂಗ್ ಕಾಲೇಜು ಪ್ರಾರಂಭ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಉತ್ತರ ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯೆಂದು ಪರಿಗಣಿಸಲ್ಪಡುವ ಭರತೇಶ ಶಿಕ್ಷಣ ಸಂಸ್ಥೆಯ ವತಿಯಿಂದ ಪ್ರಸಕ್ತ ವರ್ಷದಿಂದ ಕುಡುಚಿಯ ಚಂದ್ರಗಿರಿ ಕ್ಯಾಂಪಸ್ ನಲ್ಲಿ ಇಂಜನಿಯರಿಂಗ್ ಕಾಲೇಜು ಪ್ರಾರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ವಿನೋದ್ ದೊಡ್ಡಣ್ಣವರ ಹೇಳಿದರು.


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 1962ರಲ್ಲಿ ಭರತೇಶ ಎಜ್ಯುಕೇಶನ್ ಟ್ರಸ್ಟ್ ಹೆಸರಿನಲ್ಲಿ ಪ್ರಾರಂಭವಾದ ಈ ಸಂಸ್ಥೆ ಈಗ ಬೆಳಗಾವಿ ನಗರ, ಗಲಗಾ ಹಾಗೂ ಬಸವನ ಕುಡುಚಿಯಲ್ಲಿ ಮೂರು ಗುಣಮಟ್ಟದ ಕ್ಯಾಂಪಸ್ ಗಳನ್ನು ಹೊಂದಿದೆ ಎಂದರು.

Emergency Service


ಭರತೇಶ ಶಿಕ್ಷಣ ಸಂಸ್ಥೆಯು ಈಗಾಗಲೇ ಕಳೆದ 40 ವರ್ಷಗಳಿಂದ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಮೂಲಕ ಇಂಜನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ‌ ಎಂದರು.


ಪ್ರಸಕ್ತ ವರ್ಷದಿಂದ ಭರತೇಶ ಶಿಕ್ಷಣ ಸಂಸ್ಥೆ ಕಂಪ್ಯೂಟರ್ ಸೈನ್ಸ್, ಕೃತಕ ಬದ್ಧತೆ ಮತ್ತು ಕಲಿಕೆಯ ಯಂತ್ರ, ಮಾಹಿತಿ ವಿಜ್ಞಾನ ಹಾಗೂ ಎಲೆಕ್ಟ್ರಾನಿಕ್ ಮತ್ತು ಸಂವಹನ ಹೊಸ ಕೋಸ್೯ ಆರಂಭಿಸಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ಆಸಕ್ತ ವಿದ್ಯಾರ್ಥಿಗಳು ಇದರ ಲಾಭ ಪಡೆದಿಕೊಳ್ಳಬೇಕು ಎಂದರು.
ಭೂಷಣ್ ಮೀರ್ಜಿ, ಡಾ. ವೀಣಾ ಕರ್ಚಿ, ಶರತ್ ಪಾಟೀಲ್, ರಾಜೇಂದ್ರ ರಾಮಗೊಂಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Bottom Add3
Bottom Ad 2