
ಪ್ರಗತಿವಾಹಿನಿ ಸುದ್ದಿ, ಅಥಣಿ: ತಾಲೂಕಿನ ಮಿನಿ ವಿಧಾನಸೌಧದಲ್ಲಿ ಕಾರ್ಯಾಲಯದಲ್ಲಿ ಕಂದಾಯದ ಇಲಾಖೆಯ ಶಿರಸ್ತೇದಾರ ರವರು ಕಾರ್ಯನಿರ್ವಹಣೆ ವೇಳೆ ಹೃದಯಾಘಾತದಿಂದ ಮರಣ ಹೊಂದಿರುವ ದಾರುಣ ಘಟನೆ ಸಂಭವಿಸಿದೆ.
ಎಸ್ ಆರ್ ಹಳ್ಳೋಳಿ (೫೨) ಎಂಬುವರು ಅಥಣಿ ತಹಶೀಲ್ದಾರ್ ಕಚೇರಿಯಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ್ ಕಾರ್ಯ ನಿರ್ವಹಿಸುತ್ತಿದ್ದರು.
ಮದ್ಯಾಹ್ನ ಸಮಯದಲ್ಲಿ ಮೂತ್ರ ವಿಸರ್ಜನೆ ಸಮಯದಲ್ಲಿ ಹೃದಯಾಘಾತ ಸಂಭವಿಸಿದೆ, ಸ್ಥಳದಲ್ಲಿದ್ದ ಸಿಬಂದಿಗಳು ಗಮನಿಸಿ ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಿಸುತ್ತಾರೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಅಥಣಿ ತಹಸಿಲ್ದಾರ್ ದುಂಡಪ್ಪ ಕೊಮಾರ ಸೇರಿದಂತೆ ಅವರ ಸಹೋದ್ಯೋಗಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.