Kannada NewsLatest

ಡಿಜಿಟಲ್ ಸೇವೆಗೆ ಕೆನರಾ ಬ್ಯಾಂಕ್‍ನೊಂದಿಗೆ ಬಿಮ್ಸ್ ಒಪ್ಪಂದ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾರುಕಟ್ಟೆಯಲ್ಲಿ ನಗದು ರಹಿತ ವ್ಯವಹಾರ ಅಧಿಕವಾಗಿ ನಡೆಯುತ್ತಿದೆ ಹೀಗಾಗಿ ರೋಗಿಗಳು ಹಾಗೂ ಜನಸಾಮಾನ್ಯರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ ನಗದು ರಹಿತ/ಡಿಜಿಟಲ್ ಸೇವೆ ನೀಡಲು ಕೆನರಾ ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಎಸ್.ಎಸ್.ಬಳ್ಳಾರಿ ಹೇಳಿದರು.

ಬಿಮ್ಸ್ ನಲ್ಲಿ ಪೌಸ್ ಮಷಿನ್‍ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ರೋಗಿಗಳು ಚಿಕಿತ್ಸೆಗಾಗಿ ಸೇವಾ ಶುಲ್ಕವನ್ನು ಯಾವುದೇ ಅಡೆತಡೆ ಇಲ್ಲದೇ ಸುಗಮವಾಗಿ, ವೇಗವಾಗಿ ಪಾವತಿ ಮಾಡುವುದಕ್ಕೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಅನುಷ್ಠಾನಗೊಳಿಸಿರುವ ಈ ವ್ಯವಸ್ಥೆ ಮೂಲಕ ಈಗಿರುವ ಕೌಂಟರ್‍ಗಳಲ್ಲಿ ಬಾರ್‍ಕೋಡ್ ಹಾಗೂ ಪಿ.ಒ.ಎಸ್ ಮಷಿನ್‍ನಲ್ಲಿ ಎ.ಟಿ.ಮ್ ಕಾರ್ಡ್ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಸಂದಾಯ ಮಾಡಬಹುದು ಎಂದು ಬಿಮ್ಸ್‍ನ ಮುಖ್ಯ ಆಡಳಿತಾಧಿಕಾರಿ ಎಸ್.ಎಸ್.ಬಳ್ಳಾರಿ ಹೇಳಿದರು.

ಸದ್ಯಕ್ಕಿರುವ 6 ಕ್ಯಾಶ್ ಕೌಂಟರ್‍ಗಳಲ್ಲಿ ಕ್ಯೂಆರ್ ಕೋಡ್ ಹಾಗೂ ಎಟಿಎಂ ಕಾರ್ಡ್‍ನಿಂದ ಪಾವತಿ ಮಾಡಬಹುದು. ಬಹುತೇಕ ರೋಗಿಗಳು ಹಾಗೂ ಜನ್ಯಸಾಮ್ಯಾನರಲ್ಲಿ ಸ್ಮಾರ್ಟ್‍ಪೂನ್ ಬಳಕೆದಾರರಾಗಿದ್ದು ತಾವೇ ತಮ್ಮ ಖಾತೆಯಿಂದ ನೇರವಾಗಿ ಹಣ ಪಾವತಿಸಬಹುದು ಎಂದು ಹೇಳಿದರು. ರೋಗಿಗಳು ಕೆಲವೊಮ್ಮೆ ಚಿಲ್ಲರೆ ಇಲ್ಲದೇ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರೋಗಿಗಳಿಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಅಧಿಕಾರಿ ಬಳ್ಳಾರಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಮ್ಸ್ ನಿರ್ದೇಶಕ ಡಾ. ಆರ್.ಜಿ .ವಿವೇಕಿ, ಡಾ. ವೈದ್ಯಕೀಯ ಅಧೀಕ್ಷಕರಾದ ಡಾ.ಎ.ಬಿ ಪಾಟೀಲ, ಸಹಾಯಕ ಆಡಳಿತಾಧಿಕಾರಿಗಳಾದ ಹೇಮಂತ ಕೆ.ಕುಲಕರ್ಣಿ, ಸ್ಥಳೀಯ ವೈದ್ಯಾಧಿಕಾರಿಯಾದ ಡಾ. ಪುಷ್ಪಾ ಎಂ.ಜಿ ಹಾಗೂ ಬಿಮ್ಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಬಜೆಟ್ ಘೋಷಣೆ ಅನುಷ್ಠಾನ: ಜಿಲ್ಲಾಧಿಕಾರಿ ಪೂರ್ವಭಾವಿ ಸಭೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button