Kannada NewsLatest

ಶ್ರೀ ಬ್ರಹ್ಮಲಿಂಗೇಶ್ವರ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ಷೇತ್ರದಲ್ಲಿ ಎಲ್ಲ ಮೂಲಸೌಲಭ್ಯಗಳ ಅಭಿವೃದ್ಧಿಯ ಜೊತೆಗೆ ಜನರ ಭಾವನೆಗಳಿಗೂ ಸಾಕಷ್ಟು ಮಹತ್ವ ನೀಡಿ ಮಠ ಮಂದಿರಗಳು, ಮಸೀದಿಗಳು ಸೇರಿದಂತೆ ಸರ್ವ ಧರ್ಮೀಯರ ಶ್ರದ್ಧಾ ಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ಕ್ಷೇತ್ರದ ಸೋನೋಳಿ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ಮಂದಿರದ ನೂತನ‌ ಕಟ್ಟಡ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈ ಮಂದಿರ ನಿರ್ಮಾಣಕ್ಕಾಗಿ ತಾವು ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿದ್ದು ನಿರ್ಮಾಣದ ನಂತರ ಅದನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿಸಲು ಗ್ರಾಮಸ್ಥರು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗುರುನಾಥ ಪಾಟೀಲ, ಪ್ರಕಾಶ ಪಾಟೀಲ, ಪರುಶರಾಮ ಜಂಗ್ರೂಚೆ, ಯುವರಾಜಣ್ಣ ‌ಕದಂ, ಅಶೋಕ ಗಾವಡೆ, ಯಲ್ಲಪ್ಪ ಜಂಗ್ರೂಚೆ ವನಿತಾ ಪಾಟೀಲ, ವಾಸುದೇವ ಪಾಟೀಲ, ಯುವರಾಜ ಅಣ್ಣಾ ಕದಂ, ಮನೋಹರ್ ಜಂಗ್ರೂಚೆ, ಮನೋಹರ್ ಬೆಳಗಾಂವ್ಕರ್, ಯಲ್ಲಪ್ಪ ಡೇಕೊಳ್ಕರ್, ಮಾರುತಿ ಜಂಗ್ರೊಚೆ ಮಹೇಶ್ ಪಾಟೀಲ, ಬಾಳಾರಾಮ ಪಾಟೀಲ, ಪದ್ಮರಾಜ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸರ್ವಸದಸ್ಯರು, ಮಾಜಿ ಸದಸ್ಯರು ಉಪಸ್ಥಿತರಿದ್ದರು.

1.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

https://pragati.taskdun.com/1-5-crore-rs-drive-road-development-work-at-cost/

*ಹಾವೇರಿಯಲ್ಲಿ ಎಲ್ಲಾ ನೀರಾವರಿ ಯೋಜನೆಗೆ ಚಾಲನೆ ಕೊಟ್ಟಿದ್ದು ನಮ್ಮ ಸರ್ಕಾರ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/cm-basavaraj-bommaihaverid-k-sihivakumar/

*ಇಂತಹ ನೂರು ಸಿಡಿ ಬಂದರೂ ಹೆದರಲ್ಲ; ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ*

https://pragati.taskdun.com/ramesh-jarakiholibelagavid-k-shivakumarcd-case/

Related Articles

Back to top button