Latest

*ಬೈಕ್ ಸರಿಯಾಗಿ ಸರ್ವೀಸ್ ಮಾಡಿಲ್ಲ ಎಂದು ಶೋ ರೂಂಗೆ ಬೆಂಕಿ ಹಚ್ಚಿದ ಭೂಪ*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೊಬ್ಬ ತನ್ನ ಬೈಕ್ ಅನ್ನು ಸರಿಯಾಗಿ ಸರ್ವೀಸ್ ಮಾಡಿಕೊಟ್ಟಿಲ್ಲವೆಂದು ಓಲಾ ಎಲೆಕ್ಟ್ರಿಕ್ ವಾಹನದ ಶೋ ರೂಂಗೆ ಬೆಂಕಿ ಹಚ್ಚಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಮಹಮದ್ ನದೀಮ್ ಬೆಂಕಿ ಹಚ್ಚಿದ ಆರೋಪಿ. ಮಹಮದ್ ನದೀಮ್ ಹುಮನಾಬಾದ್ ಮುಖ್ಯರಸ್ತೆಯಲ್ಲಿನ ಓಲಾ ಎಲೆಕ್ಟ್ರಿಕ್ ವಾಹನದ ಶೋ ರೂಂಗೆ ತನ್ನ ಬೈಕ್ ಅನ್ನು ಸರ್ವೀಸ್ ಮಾಡಲು ಕೊಟ್ಟಿದ್ದ. ಆದರೆ ಅವರು ಸರಿಯಾಗಿ ಸರ್ವೀಸ್ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿ ಶೋ ರೂಂ ಸಿಬ್ಬಂದಿ ಜೊತೆಗೆ ಕ್ಯಾತೆ ತೆಗಿದಿದ್ದಾನೆ.

Home add -Advt

ಈ ವೇಳೆ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ ಎಂದು ಕೋಪದಿಂದ ಶೋ ರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಶೋ ರೂಂಗೆ ಬೆಂಕಿ ಹರಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದರು. ಘಟನೆಯಿಂದಾಗಿ ಬೈಕ್‌ಗಳು ಹಾಗೂ ಅಲ್ಲಿದ್ದ ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ. ಘಟನೆಗೆ ಸಂಬಂಧಿಸಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಮದ್‌ ನದೀಮ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.

Related Articles

Back to top button