
ಪ್ರಗತಿವಾಹಿನಿ ಸುದ್ದಿ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಪ್ರಕಾಶ್ (22), ಶಿವಾಜಿ (21), ಆಕಾಶ್ ಕಂಟೆಪ್ಪ ಗುಂಗೆ (23) ಮೃತರು. ಪ್ರಕಾಶ್ ಹಾಗೂ ಶಿವಾಜಿ ಎಂಬ ಇಬ್ಬರು ಬೀದರ್ ನ ಚಿಟಗುಪ್ಪ ತಾಲೂಕಿನ ವಿಠಲಪುರ ಗ್ರಾಮದ ಐತಿಹಾಸಿಕ ಬಾವಿಯಲ್ಲಿ ಈಜಲು ಇಳಿದಿದ್ದರು. ಈ ವೇಲೆ ಆಳದಲ್ಲಿ ಸಿಲುಕಿದ ಸ್ನೇಹಿತನನ್ನು ರಕ್ಷಿಸಲು ಹೋಗಿ ಶಿವಾಜಿ ಕೂಡ ನೀರುಪಾಲಾಗಿದ್ದಾನೆ.
ಬೆಮ್ಮಳಕೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನೊಂದು ಘಟನೆಯಲ್ಲಿ ಜಿಲ್ಲೆಯ ಹಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದ ಕೆರೆಯಲ್ಲಿ ಆಕಾಶ್ ಕಂಟೆಪ್ಪ ಎಂಬಾತ ಸ್ನೇಹಿತರ ಜೊತೆ ಈಜಲು ಕೆರೆಗೆ ಹೋದಾಗ ನೀರುಪಾಲಾಗಿ ಸಾವನ್ನಪಿದ್ದಾನೆ. ಈಜಲು ಬಾರದಿದ್ದರೂ ನೀರಿಗೆ ಇಳಿದಿದ್ದ ಎನ್ನಲಾಗಿದೆ.
ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.