
ಪ್ರಗತಿವಾಹಿನಿ ಸುದ್ದಿ; ಬೀದರ್: ಕುಟುಂಬ ಕಲಹದಿಂದ ಬೇಸತ್ತ ಬಿಜೆಪಿ ಮುಖಂಡನ ಪತ್ನಿ, ಪತಿಯ ಬ್ಯಾನರ್ ಗಳನ್ನು ಹರಿದು ಗಲಾಟೆ ಮಾಡಿರುವ ಘಟನೆ ಬೀದರ್ ನಗರದ ಮೈಲೂರು ಬಳಿ ನಡೆದಿದೆ.
ಬಿಜೆಪಿ ಮುಖಂಡ ಮಲ್ಲೇಶ್ ಗಣಪೂರ ಅವರ ಬ್ಯಾನರ್ ಅನ್ನು ಹರಿದು, ಕಿತ್ತು ಹಾಕಿ ಪತ್ನಿ ಸಾಧನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ಮಲ್ಲೇಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಮಲ್ಲೇಶ್ ಇರುವ ಬ್ಯಾನರ್ ಗಳನ್ನು ರಸ್ತೆಯುದ್ದಕ್ಕೆ ಅಳವಡಿಸಲಾಗಿತ್ತು. ಅಲ್ಲದೇ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆಯನ್ನೂ ನಡೆಸಲಾಗಿತ್ತು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಲ್ಲೇಶ್ ಪತ್ನಿ ಸಾಧನಾ, ರಸ್ತೆಯುದ್ಧಕ್ಕೂ ಅಳವಡಿಸಿದ್ದ ಬ್ಯಾನರ್ ಹರಿದು ಹಾಕಿದ್ದಾರೆ. ತಡೆಯಲು ಬಂದ ಪೊಲೀಸರೊಂದಿಗೂ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಹಿಳಾ ಪೊಲೀಸರು ಸಾಧನಾ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.
ಪತಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದು ಸಾಧನಾ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಸಾಧನಾ ಇಂದು ಪತಿಯ ಬ್ಯಾನರ್ ಹರಿದು ರಂಪಾಟ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ನಾಯಕರಾದ ಸೂರ್ಯಕಾಂತ ನಾಗಮಾರಪಲ್ಲಿ ಹಾಗೂ ಶಿವಶರಣಪ್ಪ ವಾಲಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕರೆಂಟ್ ಶಾಕ್ ಹೊಡೆದು ವ್ಯಕ್ತಿ ದುರ್ಮರಣ
https://pragati.taskdun.com/latest/electrick-shockman-deathhasana/