Latest

ನಟ ದರ್ಶನ್ ಹಲ್ಲೆ ಆರೋಪಕ್ಕೆ ಬಿಗ್ ಟ್ವಿಸ್ಟ್ : ಪೊರಕೆ ಹಿಡಿದು ಬಂದವರ್ಯಾರು?

ಪ್ರಗತಿವಾಹಿನಿ ಸುದ್ದಿ; ಮೈಸೂರು: ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಆರೋಪಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಸಿಬ್ಬಂದಿ ಗಂಗಾಧರ್, ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಕೋಪದಿಂದ ಮಾತಾಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲಿಸ್ ವಿಚಾರಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಗಂಗಾಧರ್, ಅಂದು ನಟ ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ರ್ಯಾಶ್ ಆಗಿ ಮಾತನಾಡಿದ್ದಾರೆ. ಸರ್ವಿಸ್ ತಡವಾಗಿದ್ದಕ್ಕೆ ಕೋಪಗೊಂಡು ಸಿಟ್ಟಾಗಿ ಮಾತನಾಡಿದ್ದಾರೆ ಅಷ್ಟೇ ಎಂದಿದ್ದಾರೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡುತ್ತಿರುವ ಆರೋಪಗಳು ಸುಳ್ಳು. ನಾನು ದಲಿತ ಸಮುದಾಯದವನಲ್ಲ, ಬ್ರಾಹ್ಮಣ. ನನ್ನ ಕಣ್ಣಿಗೂ ಯಾವುದೇ ತರಹದ ಏಟಾಗಿಲ್ಲ ದೃಷ್ಟಿ ಕೂಡ ಚೆನ್ನಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಹಲ್ಲೆ ಘಟನೆ ಬಳಿಕ ನನ್ನ ಪತ್ನಿ ಪೊರಕೆ ಹಿಡಿದು ಬಂದಿದ್ದರು ಎಂದು ಇಂದ್ರಜಿತ್ ಹೇಳಿದ್ದಾರೆ. ಆದರೆ ನನಗೆ ಮದುವೆಯೇ ಆಗಿಲ್ಲ. ನಾನಿನ್ನೂ ಬ್ಯಾಚುಲರ್. ಹೀಗಿರುವಾಗ ಪೊರಕೆ ಹಿಡಿದು ಬಂದಿದ್ದು ಯಾರೆಂದು ನನಗೆ ಗೊತ್ತಿಲ್ಲ. ಬಹುಶ: ಹೋಟೆಲ್ ಬಳಿ ಕಸ ಗುಡಿಸುವವರು ಪೊರಕೆ ತಂದಿರಬಹುದು, ಅದನ್ನು ನೋಡಿ ಇಂದ್ರಜಿತ್ ತಪ್ಪಾಗಿ ತಿಳಿದುಕೊಂಡು ಹಾಗೆ ಹೇಳಿರಬಹುದು ಎಂದು ತಿಳಿಸಿದ್ದಾರೆ.
ದರ್ಶನ್ ಹಲ್ಲೆ ಆರೋಪ ಕೇಸ್ ಗೆ ಬಿಗ್ ಟ್ವಿಸ್ಟ್; ನಾನು ದಲಿತ ಅಲ್ಲ, ಬ್ರಾಹ್ಮಣ ಎಂದ ಹೋಟೆಲ್ ಸಿಬ್ಬಂದಿ

Home add -Advt

Related Articles

Back to top button