Film & EntertainmentKannada NewsKarnataka NewsLatest
*ಬಿಗ್ ಬಾಸ್ ಸೀಜನ್-12ಕ್ಕೆ ಮುಹೂರ್ತ ಫಿಕ್ಸ್: ದಿನಾಂಕ ಘೋಷಿಸಿದ ಕಿಚ್ಚ ಸುದೀಪ್*

ಪ್ರಗತಿವಾಹಿನಿ ಸುದ್ದಿ: ಬಹುನಿರೀಕ್ಷಿತ ಬಿಗ್ ಬಾಸ್ ಸೀಜನ್ 12ರ ದಿನಾಂಕ ಘೋಷಣೆಯಾಗಿದೆ. ಶೀಘ್ರದಲ್ಲಿಯೇ ನಿಮ್ಮ ಮುಂದೆ ಬರಲಿದ್ದೇನೆ ಎಂದು ಹೇಳುವ ಮೂಲಕ ಸ್ವತ: ನಟ ಕಿಚ್ಚ ಸುದೀಪ್ ದಿನಾಂಕ ಘೋಷಿಸಿದ್ದಾರೆ.
ನಿರ್ಮಾಪಕ, ಉದ್ಯಮಿ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಕಿಚ್ಚ ಸುದೀಪ್, ಬಿಗ್ ಬಾಸ್ ಕನ್ನಡ ಸೀಜನ್ 12ರ ದಿನಾಂಕ ಘೋಷಿಸಿದರು. ಇದೇ ಸೆಪ್ಟೆಂಬರ್ 28ರಿಂದ ಕಿರುತೆಯಲ್ಲಿ ಬರಲಿದ್ದೇನೆ ಎಂದು ಹೇಳುವ ಮೂಲಕ ಸೆ.28ರಿಂದ ಬಿಗ್ ಬಾಸ್ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯೂ ಬಿಗ್ ಬಾಸ್ ನಿರೂಪಣೆಯನ್ನು ಕಿಚ್ಚ ಸುದೀಪ್ ಮಾಡಲಿದ್ದಾರೆ. ಇನ್ನು ಬಹುತೇಕ ಸ್ಪರ್ಧಿಗಳ ಆಯ್ಕೆ ಕೂಡ ಈಗಾಗಲೇ ಆಗಿದ್ದು, ಕೆಲ ಸ್ಪರ್ಧಿಗಳ ಆಯ್ಕೆ ಮಾತ್ರ ಬಾಕಿ ಇದೆ ಎಂದು ತಿಳಿದುಬಂದಿದೆ.



