Wanted Tailor2
Cancer Hospital 2
Bottom Add. 3

*ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ; ಮದುವೆಯಾಗಿ ಮಗು ಇದ್ದರೂ ಸುಳ್ಳು ಹೇಳಿದ್ರಾ ಬಿಗ್ ಬಾಸ್ ಸ್ಪರ್ಧಿ?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹುಲಿ ಉಗುರು ಧಾರಣೆ ಪ್ರಕರಣದಲ್ಲಿ ಸಂಕಷ್ಟ ಎದುರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮದುವೆಯಾಗಿ ಮಗು ಇರುವ ವಿಚಾರವನ್ನೇ ಮುಚ್ಚಿಟ್ಟು ತನಗೆ ಮದುವೇ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವರ್ತೂರು ಸಂತೋಷ್ ಕೋವಿಡ್ ಸಂದರ್ಭದಲ್ಲಿ ಜಯಶ್ರೀ ಎಂಬುವವರನ್ನು ವಿವಾಹವಾಗಿದ್ದು, ದಂಪತಿಗೆ ಒಂದು ಮಗು ಕೂಡ ಇದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ತನಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟಿದ್ದು ಅಲ್ಲದೇ ನಿಶ್ಚಿತಾರ್ಥ ಆಗಿದ್ದು, ಬಿಗ್ ಬಾಸ್ ನಿಂದ ಹೊರಗೆ ಹೋಗುತ್ತಿದ್ದಂತೆ ವಿವಾಹವಾಗುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ನಿಂದ ಈಗಾಗಲೇ ಹೊರಬಂದಿರುವ ಸ್ಪರ್ಧಿ ರಕ್ಷಕ್ ಬುಲೆಟ್ ಸಂದರ್ಶನವೊಂದರಲ್ಲಿ ವರ್ತೂರು ಸಂತೋಷ್ ಗೆ ನಿಶ್ಚಿತಾರ್ಥ ಆಗಿದೆ. ಬಿಗ್ ಬಾಸ್ ಮುಗಿದ ಬಳಿಕ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಈ ಬೆಳವಣಿಗೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವರ್ತೂರು ಸಂತೋಷ್ ಗೆ ಈಗಾಗಲೆ ವಿವಾಹವಾಗಿರುವ ವಿಡಿಯೋ ವೈರಲ್ ಆಗಿದೆ.

ಅಲ್ಲದೇ ವರ್ತೂರು ಸಂತೋಷ್ ಮಾವ ಅಂದರೆ ಜಯಶ್ರೀ ಅವರ ತಂದೆ ಸೋಮನಾಥ್, ವರ್ತೂರು ಸಂತೋಷ್ ಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ. ಸಾಕಷ್ಟು ಒಡವೆ ಹಣವನ್ನು ನೀಡಿ ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ತನ್ನ ಮಗಳು ಎಂ ಎಸ್ ಸಿ ಪದವೀಧರೆ. ಮದುವೆಯಾದ ಕೆಲ ದಿನಗಳಲ್ಲೇ ಆತ ತನ್ನ ಮಗಳಿಗೆ ಹೊಡೆದು ಬಡಿದು ಮಾಡುತ್ತಿದ್ದ. ದುಶ್ಚಟಗಳು ಸಾಕಷ್ಟವೆ. ದೊಡ್ಡವರೆಲ್ಲರೂ ಸೇರಿ ಹಲವು ಬಾರಿ ಬುದ್ಧಿಹೇಳಿದ್ದೆವು. ಮಗಳು ಗರ್ಭಿಣಿಯಾದ ಬಳಿಕ ತವರಿಗೆ ಕರೆತಂದಿದ್ದೆವು. ಪತ್ನಿಗೆ ಹೆರಿಗೆಯಾದರೂ ವರ್ತೂರು ಸಂತೋಷ್ ಆಗಲಿ ಆತನ ತಾಯಿ, ಸಂಬಂಧಿಕರಾಗಲಿ ಬಂದು ಮಗುವನ್ನು ನೋಡಿಲ್ಲ. ಆತ ಇಂದು ಬರುತ್ತಾನೆ, ನಾಳೆ ಬರುತ್ತಾನೆ ಎಂದು ನಾವು ಕಾಯುತ್ತಲೇ ಇದ್ದೆವು. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ತನಗೆ ನಿಶ್ಚಿತಾರ್ಥ ಆಗಿದೆ ಇನ್ನೊಂದು ಮದುವೆ ಆಗುವುದಾಗಿ ಹೇಳಿರುವ ವಿಚಾರ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಾವು ಆತನಿಗೆ ಈಗಾಗಲೇ ಮದುವೆ ಆಗಿ ಮಗು ಇದೆ ಎಂಬುದನ್ನು ಎಲ್ಲರಿಗೂ ಹೇಳಬೇಕಾಗಿ ಬಂದಿದೆ ಎಂದು ತಿಳಿಸಿದ್ದಾರೆ.

ವರ್ತೂರು ಸಂತೋಷ್ ಯಾವ ರೈತನೂ ಅಲ್ಲ, ಒಂದು ಎತ್ತು, ಒಂದು ಎಮ್ಮೆ ಇಟ್ಟುಕೊಂಡ ಮಾತ್ರಕ್ಕೆ ದೊಡ್ಡ ರೈತ, ಕೃಷಿಕನಾಗಿಬಿಡಲ್ಲ. ಈತನನ್ನು ರೈತ ಎನ್ನುವುದಾದರೆ ಆತನಿಗಿಂತ ದೊಡ್ಡ ರೈತರು ಇದ್ದಾರೆ ಅವರನ್ನೆಲ್ಲ ಏನು ಎಂದು ಹೇಳಬೇಕು? ಬರಿ ಸುಳ್ಳು, ಮೋಸ ಮಾಡುತ್ತಲೇ ಬಿಗ್ ಬಾಸ್ ವರೆಗೂ ಬಂದಿದ್ದಾನೆ. ಈಗ ಹೊಸ ನಾಟಕವಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.


Bottom Add3
Bottom Ad 2

You cannot copy content of this page