Big Breaking- ಬೆಳಗಾವಿ ಗಡಿವಿವಾದ; ಗೃಹ ಸಚಿವ ಅಮಿತ್ ಶಾ ಜೊತೆ ಗುರುವಾರ ಮಹಾರಾಷ್ಟ್ರ ಸಂಸದರ ಸಭೆ ; ಕರ್ನಾಟಕ ಸಂಸದರೇ ಎದ್ದೇಳಿ
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ ಶಾ ಗುರುವಾರ ಮಹಾರಾಷ್ಟ್ರದ ಸರ್ವಪಕ್ಷದ ಸಂಸದರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಮಹಾರಾಷ್ಟ್ರ ಸಂಸದರ ಕೋರಿಕೆಗೆ ಒಪ್ಪಿಗೆ ನೀಡಿರುವ ಅಮಿತ್ ಶಾ ಗುರುವಾರ ಮಧ್ಯಾಹ್ನ 12.40ಕ್ಕೆ ಚರ್ಚೆಗೆ ಸಮಯ ನೀಡಿದ್ದಾರೆ.
ಬುಧವಾರ ಸುಪ್ರಿಯಾ ಸುಳೆ ಸೇರಿದಂತೆ ಮಹಾರಾಷ್ಟ್ರದ ಕೆಲವು ಸಂಸದರು ಸಂಸತ್ತಿನ ಅಧಿವೇಶನದ ಮೊದಲ ದಿನವೇ ಗಡಿ ವಿವಾದ ಪ್ರಸ್ತಾಪಿಸಿ, ಕರ್ನಾಟಕದ ವಿರುದ್ಧ ಹರಿಹಾಯ್ದಿದ್ದಾರೆ. ಕರ್ನಾಟಕದ ಸಂಸದ ಶಿವಕುಮಾರ ಉದಾಸಿ ಪ್ರತ್ಯುತ್ತರ ನೀಡಿದ್ದಾರೆ.
ಇದಾದ ನಂತರದ ಮಹಾರಾಷ್ಟ್ರ ಸಂಸದರು ಅಮಿತ್ ಶಾ ಬಳಿ ಚರ್ಚೆಗೆ ಸಮಯ ಕೇಳಿದ್ದಾರೆ. ಅಮಿತ್ ಶಾ ಗುರುವಾರವೇ ಸಮಯ ನೀಡಿದ್ದಾರೆ.
ಕರ್ನಾಟಕದ ಎಲ್ಲ ಸಂಸದರೂ ಒಂದಾಗಿ ತಕ್ಷಣ ಕೇಂದ್ರ ಗೃಹ ಸಚಿವರ ಸಮಯ ಕೇಳಬೇಕು. ಗಡಿ ವಿವಾದದ ಕುರಿತು ಅಧ್ಯಯನ ಮಾಡಿ ವಿಷಯವನ್ನು ಸಮರ್ಪಕವಾಗಿ ತಿಳಿಸಬೇಕಿದೆ. ಮಹಾರಾಷ್ಟ್ರದ ಉದ್ದಟತನದ ಕುರಿತು ಕೇಂದ್ರ ಗೃಹ ಸಚಿವರಿಗೆ ವಿವರಣೆ ನೀಡಬೇಕಿದೆ.
ಶಿವಸೇನೆ ಬಳಿಕ MNS ಪುಂಡಾಟ; KSRTC ಬಸ್ ಗಳ ಮೇಲೆ ದಾಳಿ
https://pragati.taskdun.com/karnataka-maharastra-border-issueksrtc-busmnsshivasene/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ