ಜ.12ರಂದು ಬೆಳಗಾವಿಯಲ್ಲಿ ಬೃಹತ್ ಸಮ್ಮೇಳನ; 25 ಕೋಟಿ ರೂ. ಬಿಡುಗಡೆ: ಪ್ರಧಾನಿ ಮೋದಿ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜನೆವರಿ 12 ಹಾಗೂ 13ರಂದು ಬೆಳಗಾವಿಯಲ್ಲಿ ಬೃಹತ್ ಸಮ್ಮೇಳನವೊಂದು ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಜನೆವರಿ 12ರಂದು ಸ್ವಾಮಿ ವಿವೇಕಾನಂದ ಜಯಂತಿ. ತನ್ನಿಮಿತ್ತ ಬೆಳಗಾವಿಯಲ್ಲಿ 2 ದಿನಗಳ ರಾಷ್ಟ್ರೀಯ ಯುವ ಸಮ್ಮೇಳನ ಆಯೋಜಿಸಲಾಗಿದೆ. ರಾಷ್ಟ್ರದ ವಿವಿಧ ಭಾಗಗಳಿಂದ 6 ಸಾವಿರಕ್ಕೂ ಹೆಚ್ಚು ಆಯ್ದ ಯುವಕ- ಯುವತಿಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾವೇಶಕ್ಕಾಗಿ ಒಟ್ಟೂ 25 ಕೋಟಿ ರೂ. ವೆಚ್ಚವಾಗಲಿದ್ದು, ರಾಜ್ಯ ಸರಕಾರ 15 ಕೋಟಿ ರೂ. ಹಾಗೂ ಕೇಂದ್ರ ಸರಕಾರ 10 ಕೋಟಿ ರೂ. ಬಿಡುಗಡೆ ಮಾಡಿದೆ. ಸಮಾವೇಶದ ಸಿದ್ಧತೆಗಾಗಿ ಈಗಾಗಲೆ ವಿವಿಧ ಸಮಿತಿಗಳನ್ನು ರಚಿಸುವ ಕಾರ್ಯ ನಡೆಯುತ್ತಿದೆ.
ಎಲ್ಲಿ ಸಮಾವೇಶ?
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆ ನಿರ್ಮಾಣವಾಗಲಿದ್ದು ಅಲ್ಲೇ ಸಮಾವೇಶ ಉದ್ಘಾಟನೆಯಾಗಲಿದೆ. ಸಮಾವೇಶದ ಅಂಗವಾಗಿ ನಗರದ ಸಿಪಿಎಡ್ ಮೈದಾನ, ಸರದಾರ್ ಹೈಸ್ಕೂಲ್ ಮೈದಾನ ಮೊದಲಾದೆಡೆ ಪುಸ್ತಕಮಳಿಗೆಗಳು ನಿರ್ಮಾಣವಾಗಲಿವೆ. ಸಮಾವೇಶಕ್ಕೆ ಆಗಮಿಸಲಿರುವ ಪ್ರತಿನಿಧಿಗಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸಮಾವೇಶದಲ್ಲಿ ಭಾರತವಲ್ಲದೆ ಬೇರೆ ದೇಶಗಳಿಂದಲೂ ಯುವಕ -ಯುವತಿಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿಯವರಲ್ಲದೆ ಇನ್ನೂ ಕೆಲವು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಹಲವಾರು ಸಚಿವರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಶ್ವಕನ್ನಡ ಸಮ್ಮೇಳನದ ನಂತರ ಇದೊಂದು ಬೆಳಗಾವಿಯ ಐತಿಹಾಸಿಕ ಸಮ್ಮೇಳನವಾಗುವ ನಿರೀಕ್ಷೆ ಇದೆ.
ಶುಕ್ರವಾರವೇ ನೇಕಾರ ಸಮ್ಮಾನ್ ನಿಧಿ ಬಿಡುಗಡೆ ; ಶನಿವಾರ ನೇಕಾರರ ಸಮಸ್ಯೆ ಚರ್ಚೆ – ಶಾಸಕ ಅಭಯ ಪಾಟೀಲ್ ಗೆ ಸಿಎಂ ಭರವಸೆ
https://pragati.taskdun.com/nekar-weaver-samman-nidhi-released-on-friday-discussion-on-weavers-issue-on-saturday-cm-promises-to-mla-abhay-patil/
*ಸುಳ್ಳು ದೂರು ನೀಡಿ ಬೆಳಗಾವಿಗರ ನೆಮ್ಮದಿ ಕೆಡಿಸಿದ್ದ ಸರಕಾರಿ ವಾಹನ ಚಾಲಕ; ಆತನ ವಿರುದ್ಧವೇ ಬಿತ್ತು ಕೇಸ್*
https://pragati.taskdun.com/govt-vehicle-driver-made-falls-alligation-and-lie-complaint/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ