Kannada NewsKarnataka NewsLatest

ಬಿಜೆಪಿ ಬೆಂಬಲಿತರಿಗೆ ಅಮೋಘ ಗೆಲುವು – ಬಸವಪ್ರಸಾದ ಜೊಲ್ಲೆ ವಿಶ್ವಾಸ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ –  ಅಪ್ಪಾಚಿವಾಡಿ ಗ್ರಾಮದ ಶ್ರೀ ಹಾಲಸಿದ್ಧನಾಥ ಮಂದಿರಕ್ಕೆ  ಬಸವಜ್ಯೋತಿ ಯೂಥ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡು, ಗ್ರಾಮ ಪಂಚಾಯತ ಚುನಾವಣಾ ಪ್ರಚಾರಾರ್ಥವಾಗಿ ಅಪ್ಪಾಚಿವಾಡಿ, ಹದನಾಳ, ಮತ್ತಿವಡೆ, ಸುಳಗಾಂವ ಗ್ರಾಮಗಳಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚಿಸಿ, ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಗ್ರಾಮಮಟ್ಟದಲ್ಲಿ ಬಿಜೆಪಿಯನ್ನು ಬಲಿಷ್ಠ ಮಾಡಿ, ಹಳ್ಳಿಯಿಂದ ದಿಲ್ಲಿಯ ತನಕ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಎಲ್ಲರೂ ಕೈಜೋಡಿಸಬೇಕು. ಜನಪರ  ಪಕ್ಷವಾಗಿರುವ ಬಿಜೆಪಿಯ ಮೂಲಮಂತ್ರವೇ ಅಭಿವೃದ್ಧಿಯಾಗಿದೆ. ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಪ್ರಜೆಗಳ ಮನೆ ಬಾಗಿಲಿಗೆ ಮುಟ್ಟುತ್ತಿದೆ. ಇದರಿಂದ ರಾಜ್ಯದಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿತರು ಅಮೋಘ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಗಣ್ಯರು, ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button