ಪ್ರಗತಿವಾಹಿನಿ ಸುದ್ದಿ;ಪಾಟ್ನಾ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಆರ್ ಎಸ್ ಎಸ್ ಜತೆಗೆ ಹೋಲಿಸಿ ಪಾಟ್ನಾ ಎಸ್ ಎಸ್ ಪಿ ಮಾನವಜಿತ್ ಸಿಂಗ್ ಧಿಲ್ಲೋನ್ ವಿವಾದಕ್ಕೀಡಾಗಿದ್ದಾರೆ.
ಆರ್ ಎಸ್ ಎಸ್ ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಹಾರ ಪೊಲೀಸ್ ಇಲಕಹೆ ಎಸ್ ಎಸ್ ಪಿ ಮಾನವಜಿತ್ ಸಿಂಗ್ ಧಿಲ್ಲೋನ್ ಗೆ ಮುಂದಿನ 48ಗಂಟೆಗಳೊಳಗೆ ಉತ್ತರ ನೀಡುವಂತೆ ಶೋಕಾಸ್ ನೀಟೀಸ್ ಜಾರಿ ಮಾಡಿದೆ.
ಪಾಟ್ನಾದ ನಯಾಟೋಲಾ ಎಂಬಲ್ಲಿ ಉಗ್ರರ ಕ್ಯಾಂಪ್ ಇದೆ ಎಂಬ ಬಗ್ಗೆ ಮಾಹಿತಿ ಕಲೆಹಾಕಿದ ಬಿಹಾರ ಪೊಲೀಸರು ದಾಳಿ ನಡೆಸಿ ಇಬ್ಬರು ಶಕಿತ ಉಗ್ರರನ್ನು ಬಂಧಿಸಿದ್ದರು. ಬಂಧಿತ ಉಗ್ರರು ಪಿಎಫ್ ಐ ಸಂಘಟನೆ ಸದಸ್ಯರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಇವರು ಫುಲ್ವಾರಿ ಶರೀಫ್ ನಲ್ಲಿ ತರಬೇತಿ ಪಡೆದಿದ್ದರು. ಈ ಬಗ್ಗೆ ಮಾಹಿತಿ ನೀಡುವಾಗ ಪೊಲೀಸ್ ಅಧಿಕಾರಿ ಧಿಲ್ಲೋನ್ ಸಿಂಗ್ ಪಿಎಸ್ ಐ ನ್ನು ಆರ್ ಎಸ್ ಎಸ್ ಶಾಕೆಗೆ ಹೋಲಿಸಿದ್ದರು.
ಆರ್ ಎಸ್ ಎಸ್ ನ ಶಾಖೆಗಳು ಹಾಗೂ ಆರ್ ಎಸ್ ಎಸ್ ನಿಂದ ಲಾಠಿ ಬಳಸಲು ತರಬೇತಿ ಇರುವಂತೆಯೇ ದೈಹಿಕ ಶಿಕ್ಷಣದ ನೆಪದಲ್ಲಿ ಪಿಎಸ್ಫ್ ಐ ಯುವಕರನ್ನು ತಮ್ಮ ಕೇಂದ್ರಕ್ಕೆ ಜನರನ್ನು ಕರೆದು ಅವರ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದರು. ಇದೀಗ ಸಂಘಪರಿವಾರದ ಕೆಂಗಣ್ಣಿಗೆ ಕಾರಣವಾಗಿದೆ.
ಕೋವಿಡ್ ಬೆನ್ನಲ್ಲೇ ಶಾಲಾ ಮಕ್ಕಳಲ್ಲಿ ಕಂಡು ಬರುತ್ತಿದೆ ಹೊಸ ರೋಗ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ