National

*ಭೀಕರ ಬೆಂಕಿ ಅವಘಡ: 36ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮ*

ಪ್ರಗತಿವಾಹಿನಿ ಸುದ್ದಿ: ಭಾಗಲ್ಪುರ ಜಿಲ್ಲೆಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, 36ಕ್ಕೂ ಹೆಚ್ಚು ಮನೆಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.

ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ. ಹೆಚ್ಚಿನ ಜನರು ಮೆಕ್ಕೆ ಜೋಳ ಕೊಯ್ಲಿಗಾಗಿ ಹೊಲಕ್ಕೆ ಹೋಗಿದ್ದ ವೇಳೆ ಕಾಡ್ಗಿಚ್ಚಿನಿಂದಾಗಿ ಹಾರಿದ ಬೆಂಕಿಯ ಕಿಡಿ ಗ್ರಾಮದ ಮನೆಗಳಿಗೆ ಹೊತ್ತಿಕೊಂಡಿದೆ. ಬ್ರಹ್ಮದೇವ್ ಎಂಬುವವರ ಮನೆಗೆ ಮೊದಲು ಬೆಂಕಿ ತಗುಲಿತ್ತು. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿದೆ.

Home add -Advt

ಧಗಧಗನೆ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಗ್ರಾಮಸ್ಥರು ಹೊಲಕ್ಕೆ ಹೋಗಿದ್ದ ಮನೆಯವರಿಗೆ ಸುದ್ದಿ ತಿಳಿಸಿದ್ದಾರೆ. ಅವರು ಧಾವಿಸಿ ಬರುವಷ್ಟರಲ್ಲಿ ಬಹುತೇಕ ಮನೆಗಳು ಸಂಪೂರ್ಣ ಸುಟ್ಟು ಹೋಗಿದ್ದವು. ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿದು ಬರುವಷ್ಟರಲ್ಲಿ 36 ಮನೆಗಳು ಸುಟ್ಟು ಕರಕಲಾಗಿವೆ. 2 ಹಸುಗಳು, ಎರಡು ಮೇಕೆಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

Related Articles

Back to top button