Latest

ಬೈಕ್ ಅಪಘಾತ; ಚಿಕ್ಕೋಡಿ ಮೂಲದ ತಾಯಿ- ಮಗು ಸಾವು

ಪ್ರಗತಿವಾಹಿನಿ ಸುದ್ದಿ, ಧಾರವಾಡ: ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಮೂಲದ ತಾಯಿ- ಮಗು ಮೃತಪಟ್ಟಿದ್ದಾರೆ.

ಚಿಕ್ಕೋಡಿ ತಾಲೂಕು ನಾಗರಾಳ ಗ್ರಾಮದ ಸಂಗವ್ವ ಜಕ್ಕಪ್ಪ ಹೆಗ್ಗಣ್ಣವರ (22) ಹಾಗೂ ಮಗಳು ಮಾಯಕ್ಕ(1) ಮೃತಪಟ್ಟವರು. ಬೈಕ್ ಚಲಾಯಿಸುತ್ತಿದ್ದ ಜಕ್ಕಪ್ಪ ಹೆಗ್ಗಣ್ಣವರ ಗಾಯಗೊಂಡಿದ್ದಾರೆ.

Home add -Advt

ನಗರ ಹೊರವಲಯದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://pragati.taskdun.com/breast-and-cervical-cancer-screening-on-womens-day/
https://pragati.taskdun.com/dr-cm-sonali-sarnobat-drew-attention-to-the-development-of-belagavi/
https://pragati.taskdun.com/r-dhruvanarayanadeathcongress/

Related Articles

Back to top button