Latest

*ಭೀಕರ ಬೈಕ್ ಅಪಘಾತ; ASI ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಭೀಕರ ಬೈಕ್ ಅಪಘಾತದಲ್ಲಿ ಹೊಸಪೇಟೆ ಠಾಣೆಯ ಎಎಸ್ ಐ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿನ್ನು ಡಾಬಾ ಬಳಿ ನಡೆದಿದೆ.

ಶಬ್ಬೀರ್ ಹುಸೇನ್ (59) ಮೃತ ಎ ಎಸ್ ಐ. ಶಬ್ಬೀರ್ ಅವರು ಹೊಸಪೇಟೆ ಠಾಣೆಯ ಎ ಎಸ್ ಐ ಆಗಿ ಕಾರ್ಯನಿರ್ವಹಿಸುತಿದ್ದರು. ಕೊಟ್ಟೂರು ತರಳಬಾಳು ಹುಣ್ಣಿಮೆ ಮೆರವಣಿಗೆ ವೇಳೆ ಕಾಳಾಪುರ ಗ್ರಾಮದಲ್ಲಿ ನಡೆದಿದ್ದ ಗಲಾಟೆ ಪ್ರಕರಣ ಸಂಬಂಧ ವಿಚಾರಣೆಗೆ ಆಗಮಿಸಿದ್ದರು. ವಿಚಾರಣೆ ಮುಗಿಸಿ ಚಿತ್ರದುರ್ಗದಲ್ಲಿರುವ ಮಗಳ ಮನೆಗೆ ತೆರತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಎ ಎಸ್ ಐ ಶಬ್ಬೀರ್ ಹುಸೇನ್ ತೀವ್ರ ರಕ್ತಸ್ರಾವದಿಂದ ಸ್ಥಲದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

*ಕಾರಿಗೆ ಒಂಟೆ ಡಿಕ್ಕಿ; ಸ್ಥಳದಲ್ಲೇ ನಾಲ್ವರು ದುರ್ಮರಣ*

https://pragati.taskdun.com/saudi-arabiacamelcaraccidentfour-death/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button