Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ಬೈಕ್ ಕಳ್ಳನ ಬಂಧನ; 5 ಬೈಕ್ ಗಳು ಜಪ್ತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೀಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕ್ಯಾಂಪ್ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, 5 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ನಗರದಲ್ಲಿ ಘಟಿಸುತ್ತಿದ್ದ ಬೈಕ್ ಕಳ್ಳತನ ಪ್ರಕರಣ ಹಾಗೂ ವಾಹನ ಕಳ್ಳರನ್ನು ಪತ್ತೆ ಮಾಡುವಂತೆ ಹಿರಿಯ ಪೊಲಿಸ್ ಅಧಿಕಾರಿಗಳ ಸೂಚನೆ ಮೆರೆಗೆ ಎಸಿಪಿ ಖಡೇಬಜಾರ್ ಮಾರ್ಗದರ್ಶನದಲ್ಲಿ ಕ್ಯಾಂಪ್ ಠಾಣೆಯ ಪಿಐ ಅಲ್ತಾಫ್ ಮುಲ್ಲಾ ಹಾಗೂ ಪಿಎಸ್ ಐ ಎ.ರುಕ್ಮಿಣಿ, ಎಸ್.ಎಸ್ ಪೂಜಾರಿ ಹಾಗೂ ಸಿಬ್ಬಂದಿಗಳ ತಂಡ ಓರ್ವ ಸಂಶಯಾಸ್ಪದ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಸೈಫಿಲ್ ಕಾಜೀಮ ತಹಶೀಲ್ದಾರ್ (35) ಬೆಳಗಾವಿಯ ಉಜ್ವಲ್ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಬಂಧಿತನಿಂದ 3 ಹೀರೋ ಹೋಂಡಾ ಆಕ್ಟೀವಾ, 1 ಫ್ಯಾಶನ್ ಪ್ಲಸ್ ಹಾಗೂ 1 ಆಕ್ಟಿವಾ ಸೇರಿ 5 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.

ಬಂಧ ಆರೋಪಿ ಘಟಪ್ರಭಾ ರೈಲು ನಿಲ್ದಾಣ, ನಿಪ್ಪಾಣಿ ಸರ್ಕಾರಿ ಆಸ್ಪತ್ರೆ ಆವರಣ, ಚಿಕ್ಕೋಡಿ ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ತಲಾ ಒಂದು ಬೈಕ್ ಹಾಗೂ ಕೆ ಎಲ್ ಇ ಆಸ್ಪತ್ರೆ ಆವರಣದಲ್ಲಿ 2 ಬೈಕ್ ಗಳನ್ನು ಕಳ್ಳತನ ಮಾಡಿದ್ದ. ಒಟ್ಟು 1,35,000 ರು ಮೌಲ್ಯದ ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.

Home add -Advt

ಕ್ಯಾಂಪ್ ಠಾಣೆ ಪೊಲೀಸರ ಕಾರ್ಯಾಚರಣೆಯನ್ನು ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button