Kannada NewsLatestNational

*ಬೈಕ್ ಗೆ ರೈಲು ಡಿಕ್ಕಿ: ದಂಪತಿ ಸೇರಿ ಒಂದೇ ಕುಟುಂಬದ ಐವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬೈಕ್ ಹಾಗೂ ರೈಲಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ ಸೇರಿ ಐವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಉತ್ತರ ಪ್ರದೇಶದ ಶಹಜಹಾನ್ ಪುರ ಜಿಲ್ಲೆಯಲ್ಲಿ ಹಳಿ ದಾಟುತ್ತಿದ್ದ ಬೈಕ್ ಗೆ ವೇಗವಾಗಿ ಬಂದ ಪ್ರಯಾಣಿಕರ ರೈಲು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ಥಳದಲ್ಲೇ ದಂಪತಿ ಹಾಗೂ ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದಾರೆ.

ಮೃತರನ್ನು ಲಿಖಿಂಪುರ ಜಿಲ್ಲೆಯ ವಂಕಾ ಗ್ರಾಮದ ನಿವಾಸಿ ಸೇಠ್ ಪಾಲ್, ಹಾಗೂ ಅವರ ಪತ್ನಿ ಪೂಜಾ, ಇಬ್ಬರು ಮಕ್ಕಳು, ಹಾಗೂ ಸೇಠ್ ಪಾಲ್ ಅವರ ಸಹೋದರ ಹರಿ ಓಂ ಎಂದು ಗುರುತಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button