Belagavi NewsBelgaum NewsEducationKannada NewsKarnataka NewsLatest
*ಬಿಮ್ಸ್ ಎಂ.ಬಿ.ಬಿ.ಎಸ್. ಪ್ರವೇಶ ಮಿತಿ 150 ರಿಂದ 200 ಕ್ಕೆ ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ 2025 -26ನೇ ಸಾಲಿಗೆ MBBS ಸೀಟಗಳ ಪ್ರವೇಶ ಮಿತಿಯನ್ನು150 ರಿಂದ 200ಕ್ಕೆ ಹೆಚ್ಚಳ ಮಾಡಲಾಗಿದೆ.
ಕರ್ನಾಟಕದಲ್ಲಿ ಎರಡನೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯ ಬಿಮ್ಸ್ ಸಂಸ್ಥೆಗೆ ಇದೀಗ 2025 -26ನೇ ಸಾಲಿಗೆ MBBS ಸೀಟಗಳ ಪ್ರವೇಶಾತಿ ಮಿತಿಯನ್ನು 150 ರಿಂದ 200 ಕ್ಕೆ ಹೆಚ್ಚಿಸಲು ಅನುಮತಿ ನೀಡಲಾಗಿದೆ.
National Medical Council 2025 -26ನೇ ಸಾಲಿಗೆ MBBS ಸೀಟಗಳ ಪ್ರವೇಶಾತಿ ಹೆಚ್ಚಳ ಮಾಡಿ ಅಧೀಕೃತ ಆದೇಶವನ್ನು ಹೊರಡಿಸಿದೆ. ಇದರಿಂದ ಗ್ರಾಮೀಣ ಭಾಗದ ಬಡವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲಕರವಾಗಲಿದೆ ಎಂದಿರುವ ಸಂಸ್ಥೆಯ ನಿರ್ದೇಶಕ ಡಾ. ಅಶೋಕ್ ಕುಮಾರ್ ಶೆಟ್ಟಿ, ಇದಕ್ಕೆ ಕಾರಣಿಕರ್ತರಾದ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ.
https://pragativahini.com/?p=224832