Latest

*ಕೆಲವೇ ಕ್ಷಣಗಳಲ್ಲಿ ಮಾಂಡವಿ ಪ್ರದೇಶಕ್ಕೆ ಅಪ್ಪಳಿಸಲಿದೆ ಚಂಡಮಾರುತ; ಕಟ್ಟೆಚ್ಚರ ಬೆನ್ನಲ್ಲೇ 75 ಸಾವಿರ ಜನರ ಸ್ಥಳಾಂತರ*

ಪ್ರಗತಿವಾಹಿನಿ ಸುದ್ದಿ; ಅಹಮದಾಬಾದ್: ಬಿಪರ್ ಜಾಯ್ ಚಂಡಮಾರುತದ ರೌದ್ರಾವತಾರ ಆರಂಭವಾಗಿದ್ದು, ಗುಜರಾತ್ ಕಡಲ ತೀರದಿಂದ ಕೇವಲ 200 ಕಿ.ಮೀ ದೂರದಲ್ಲಿ ಚಂದಮಾರುತ ಬೀಸುತ್ತಿದೆ. ಮಧ್ಯಾಹ್ನ 3 ಗಂಟೆಗೆ ಗುಜರಾತ್ ನ ಮಾಂಡವಿ ಪ್ರದ್ರ‍ೇಶಕ್ಕೆ ಚಂಡಮಾರುತ ಅಪ್ಪಳಿಸಲಿದೆ.

ಚಂದಮಾರುತ ಹಿನ್ನೆಲೆಯಲ್ಲಿ ಗುಜರಾತ್, ಮಹಾರಾಷ್ಟ್ರ ಸೇರಿದಂತೆ 9 ರಾಜ್ಯಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗುಜರಾತ್ ನಲ್ಲಿ ಶಾಲ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಗುಜರಾತ್ ನಲ್ಲಿ 140-150 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ವರುಣಾರ್ಭಟವೂ ಆರಂಭವಾಗಿದೆ. ದ್ವಾರಕಾ, ಕಚ್, ಸೌರಾಷ್ಟ್ರ, ಜುನಾಗಢ, ಪೋರ್ ಬಂದರ್, ಗಾಂಧಿನಗರ, ಮೊರ್ಬಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದೇವ ಭೂಮಿ ದ್ವಾರಕಾದಲ್ಲಿ ಕಡಲ ಅಲೆ ಆರ್ಭಟ ಹೆಚ್ಚಾಗಿದ್ದು, ಮನೆಗಳು ಧರಾಶಾಹಿಯಾಗಿವೆ. ಗುಜರಾತ್ ನಲ್ಲಿ 75,000 ಜನರನ್ನು ಸ್ಥಳಾಂತರ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿಯೂ ಚಮ್ಡಮಾರುತ ಹಿನ್ನೆಲೆಅಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಮುಂಬೈ, ರತ್ನಗಿರಿ ಸೇರಿದಂತೆ ಹಲವೆಡೆ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಎರಡೂ ರಾಜ್ಯಗಳಲ್ಲಿ ರಕ್ಷಣ ಅಕಾರ್ಯಾಚರಣೆಗಾಗಿ 33 ಎನ್ ಡಿ ಆರ್ ಎಫ್ ತಂದ ನಿಯೋಜಿಸಲಾಗಿದೆ.

ಬಿಪರ್ ಜಾಯ್ ಚಂಡ ಮಾರುತದ ಅಬ್ಬರ ಕರ್ನಾಟಕದ ಕರಾವಳಿಯಲ್ಲಿಯೂ ಹೆಚ್ಚುತ್ತಿದ್ದು, ದಕ್ಷೀನ ಕನ್ನಡ, ಮಂಗಳೂರು, ಕಾರವಾರ ಸಮುದ್ರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button