Kannada NewsKarnataka NewsLatest

ಬೀರೇಶ್ವರ ಸಂಸ್ಥೆಯ ಸಿಬ್ಬಂದಿಗೆ ಪಿಂಚಣಿ ಯೋಜನೆ ಜಾರಿ -ಸಂಸದ ಅಣ್ಣಾಸಾಹೇಬ‌ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ –  ಬೀರೇಶ್ವರ ಸಂಸ್ಥೆಯ ಸಿಬ್ಬಂದಿಗಳಿಗೆ ಈಗಾಗಲೇ ಸಾಕಷ್ಟು ಸೌಲತ್ತುಗಳನ್ನು ಹಾಗೂ ಅವರ ಜೀವನ ನಿರ್ವಹಣೆಗಾಗಿ ಉತ್ತಮವಾದ ವೇತನವನ್ನು ನೀಡುವದರೊಂದಿಗೆ,ಪ್ರಸ್ತಕ ವರ್ಷದಿಂದ ಸಿಬ್ಬಂದಿಗಳ ಕುಟುಂಬ ನಿರ್ವಹಣೆಗಾಗಿ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಬೀರೇಶ್ವರ ಬ್ಯಾಂಕಿನ ಸಂಸ್ಥಾಪಕ ಹಾಗೂ ಸಂಸದ ಅಣ್ಣಾಸಾಹೇಬ‌ ಜೊಲ್ಲೆ ತಿಳಿಸಿದರು.
.ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಫಾರ್ಮಹೌಸ್’ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಕಳೆದ ಹಲವಾರು ವರ್ಷಗಳಿಂದ ಬೀರೇಶ್ವರ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಾ ಬಂದಿದ್ದೇವೆ.
ಸಿಬ್ಬಂದಿಗಳು ನಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರೆಗೆ ಆರ್ಥಿಕವಾಗಿ ಉತ್ತಮ ರೀತಿಯಿಂದ ಕುಟುಂಬ ನಿರ್ವಹಣೆ ಮಾಡಬಹುದಾಗಿದೆ. ಆದರೆ ಸಿಬ್ಬಂದಿಗೆ ನಿವೃತ್ತಿ ನಂತರ ಭವಿಷ್ಯ ನಿಧಿ ಇಲಾಖೆಯಿಂದ ನಿವೃತ್ತಿ ವೇತನ ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ದೊರಕುವುದರಿಂದ, ಅಲ್ಲದೆ ಸಿಬ್ಬಂದಿ ಮರಣಾನಂತರ ಅವರ ಕುಟುಂಬಕ್ಕೆ ದೊರಕುವ ಪಿಂಚಣಿ ಮೊತ್ತ ಕೂಡ ಅಲ್ಪಪ್ರಮಾಣದಲ್ಲಿ ಇರುವುದರಿಂದ, ಬಹಳಷ್ಟು ನಿವೃತ್ತಿ ಸಿಬ್ಬಂದಿಗಳಾಗಲಿ ಅವರ ಕುಟುಂಬದವು ಹಣಕಾಸು ಸಮಸ್ಯೆಗಳನ್ನು ಎದುರಿಸುವಂತ ಪ್ರಸಂಗ ಉಂಟಾಗುತ್ತದೆ. ಮಕ್ಕಳ ಶಿಕ್ಷಣ, ಮದುವೆ, ಆಸ್ಪತ್ರೆ ಖರ್ಚು ವೆಚ್ಚ ಇದರ ಹೊರತಾಗಿ ಇನ್ನುಳಿದ ಜೀವನ ನಿರ್ವಹಣೆಯು ಕಷ್ಟಕರವಾಗಿರುತ್ತೆ. ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಸಿಬ್ಬಂದಿಗಳ ಕುಟುಂಬ ನಿರ್ವಹಣೆಗಾಗಿ ಪಿಂಚಣಿ ಯೋಜನೆಯನ್ನು ಸಂಸ್ಥೆಯ ಮುಖಾಂತರ ಪ್ರಸ್ತಕ ವರ್ಷದಿಂದ ಜಾರಿಗೆ ತರಲಾಗಿದೆ ಎಂದರು.
ಬೀರೇಶ್ವರ ಸಂಸ್ಥೆಯ ಖಾಯಂಮಾತಿ ಹೊಂದಿದ ೧೦೦೬ ಸಿಬ್ಬಂದಿಗಳಿಗೆ ಪಿಂಚಣಿ ಯೋಜನೆಗೆ ಒಳಪಡಿಸಲಾಗಿದ್ದು, ಸಂಸ್ಥೆಯಿಂದ ಪ್ರತಿ ವರ್ಷ ೨ ಕೋಟಿ ರೂಪಾಯಿ ಟ್ರಸ್ಟಗೆ ಪಿಂಚಣಿ ರೂಪದಲ್ಲಿ ಕಾರ್ಪಸ್ ಫಂಡ್ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ಸಿಬ್ಬಂಗಳ ಪ್ರತಿ ತಿಂಗಳ ವೇತನದಿಂದ ವಂತಿಗೆಯನ್ನು ಟ್ರಸ್ಟಗೆ ಪಡೆದುಕೊಳ್ಳಲಾಗುತ್ತದೆ. ಬೀರೇಶ್ವರ ಸಂಸ್ಥೆಯಲ್ಲಿ ೦೧-೦೪-೨೦೨೨ ರ ನಂತರ ನಿವೃತ್ತಿ ಹೊಂದುವ ಸಿಬ್ಬಂದಿಗಳು ಪಿಂಚಣಿ ಯೋಜನೆಯ ಲಾಭ ಪಡೆಯಲಿದ್ದಾರೆ.
ಸಂಸ್ಥೆಯಲ್ಲಿ ಖಾಯಂಮಾತಿ ಹೊಂದಿದ ಸಿಬ್ಬಂದಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ಸಿಬ್ಬಂದಿಗಳು ಶಾಶ್ವತ ಅಂಗ ವೈಕಲ್ಯ ಹೊಂದಿದಲ್ಲಿ, ನಿವೃತ್ತಿ ನಂತರದ ಪಿಂಚಣಿಯ ಅರ್ಧ ಭಾಗದಷ್ಟು ಪಿಂಚಣಿಯನ್ನು ತಕ್ಷಣದಿಂದಲೆ ಪಡೆಯಲಿದ್ದಾರೆ.
ಸಿಬ್ಬಂದಿಗಳು ನಿವೃತ್ತಿ ಸಮಯದಲ್ಲಿ ತಮ್ಮ ವಂತಿಗೆ ಸಂಪೂರ್ಣ ಭರಣಾ ಆಗದೆ ಇದ್ದಲ್ಲಿ ಅಂತಹ ಸಿಬ್ಬಂದಿಗಳು ಉಳಿದ ವಂತಿಕೆಯ ಹಣ ಒಂದೇ ಕಂತಿನಲ್ಲಿ ತುಂಬಿ ತಕ್ಷಣದಿಂದ ಪಿಂಚಣಿ ಯೋಜನೆ ಲಾಭ ಪಡೆಯಲಿದ್ದಾರೆ.ಪ್ರಧಾನ ವ್ಯವಸ್ಥಾಪಕ ಉಪಪ್ರಧಾನ ವ್ಯವಸ್ಥಾಪಕ, ಸಹಾಯಕ ಪ್ರಧಾನ ವ್ಯವಸ್ಥಾಪಕರ 25,000/-, ಹಿರಿಯ ಶಾಖಾವ್ಯವಸ್ಥಾಪಕರು, ಕಿರಿಯ ಶಾಖಾವ್ಯವಸ್ಥಾಪಕರು
ಶಾಖಾವ್ಯವಸ್ಥಾಪಕರು, ಹಿರಿಯ ಕ್ಲರ್ಕ್,ಕಿರಿಯ ಕ್ಲರ್ಕ್ 20,000/- , ಹಿರಿಯ ಸಿಪಾಯಿ, ಕಿರಿಯ ಸಿಪಾಯಿ, ಹಿರಿಯ ಸೆಕ್ಯೂರಿಟಿ, ಕಿರಿಯ ಸೆಕ್ಯೂರಿಟಿ, ಹಿರಿಯ ಡ್ರೈವರ್, ಕಿರಿಯ ಡ್ರೈವರ್ 15,000/- ಈ ರೀತಿಯಾಗಿ ನಿವೃತ್ತಿ ವೇತನವನ್ನು ನೀಡಲಾಗುವುದು ಎಂದು ಸಂಸದ ಅಣ್ಣಾಸಾಹೇಬ‌ ಜೊಲ್ಲೆ ತಿಳಿಸಿದರು..
ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ, ಉಪಾಧ್ಯಕ್ಷರಾದ  ಸಿದ್ರಾಮ ಗಡದೆ, ಸಂಚಾಲಕ ಮಂಡಳಿಯ ಸದಸ್ಯರಾದ   ಅಪ್ಪಾಸಾಹೇಬ ಜೊಲ್ಲೆ,   ಯಾಸಿನ ತಾಂಬೂಳಿ,   ಬಸಪ್ಪ ಗುರವ,ಶ್ರೀ ಬಿಪಿನಚಂದ್ರ ದೇಶಪಾಂಡೆ, ಸಂಸ್ಥೆಯ ಪ್ರಧಾನ ವ್ಯವ್ಥಾಪಕರಾದ   ರವೀಂದ್ರ ಚೌಗಲಾ, ಉಪಪ್ರಧಾನ ವ್ಯವಸ್ಥಾಪಕರಾದ   ಎಂ.ಕೆ.ಮಂಗಾವತೆ, ಶ್ರೀ ರಮೇಶ ಕುಂಬಾರ,  ಸುರೇಶ ಮಾನೆ,   ಬಹದ್ದೂರ ಗುರವ,   ಶಿವಪುತ್ರ ಡಬ್ಬ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ   ಕಲ್ಲಪ್ಪ ಹುನ್ನರಗಿ,   ಶೇಖರ ಪಾಟೀಲ, ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button