Kannada NewsKarnataka NewsLatest

ಶಾಸಕ ಅನಿಲ ಬೆನಕೆ ಅಭಿಮಾನಿಗಳಿಂದ ಹುಟ್ಟು ಹಬ್ಬ ಆಚರಣೆ

ಪ್ರಗತಿವಾಹಿನಿ  ಸುದ್ದಿ – ಬೆಳಗಾವಿ :

ಶಾಸಕ ಅನಿಲ ಬೆನಕೆ  ಹುಟ್ಟು ಹಬ್ಬ ದ ಪ್ರಯುಕ್ತ ಅವರ ಅಪಾರ ಅಭಿಮಾನಿಗಳಿಂದ  ನಗರದ ಚನ್ನಮ್ಮ ವೃತ್ತದಲ್ಲಿರುವ ಗಣಪತಿ ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರ ಅಭಿಮಾನಿಗಳು  ನಗರದ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲವನ್ನು ಹಂಚಿದರು ಹಾಗೂ ವಿನಾಯಕ ನಗರದಲ್ಲಿ 200 ಸಸಿಗಳನ್ನು ನೆಡುವುದರ ಮೂಲಕ ಪರಿಸರ ಸ್ನೇಹಿ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಆಚರಿಸಿದರು.

ನಂತರದಲ್ಲಿ ಕಂಗ್ರಾಳಿ ಕೆ.ಎಚ್ ನಲ್ಲಿರುವ ಸಮೃದ್ಧಿ ಅನಾಥಾಲಯದಲ್ಲಿನ ವಿಕಲ ಚೇತನ ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ, ಅಲ್ಲಿನ ಮಕ್ಕಳಿಗೆ ನೊಟ್ ಪುಸ್ತಕಗಳನ್ನು ಹಾಗೂ ಉಪಹಾರವನ್ನು ನೀಡಿ, ನಗರದ ಹಲವೆಡೆ ಸಿಹಿಯನ್ನು ಹಂಚಲಾಯಿತು.  .

Home add -Advt

ಈ ಸಂದರ್ಭದಲ್ಲಿ ನಿಖಿಲ ಮುರ್ಕುಟೆ, ತಾಜ್ ಶೇಖ, ಹನಮಂತ ಕಾಗಲಕರ, ಈರಯ್ಯ ಖೋತ, ಜಾರ್ಜ ಡಿಸೋಜಾ, ನಾಗೇಶ ಲಂಗರಖಂಡೆ, ರಾಹುಲ ಮುಚ್ಚಂಡಿ, ದತ್ತಾ ಬಿಲಾವರ ಹಾಗೂ  ಅಭಿಮಾನಿಗಳು ಉಪಸ್ಥಿತರಿದ್ದರು. ////

Related Articles

Back to top button