Latest

ರೈಲು ಡಿಕ್ಕಿ ಹೊಡೆದು ಕಾಡುಕೋಣ ಸಾವು

ಪ್ರಗತಿವಾಹಿನಿ ಸುದ್ದಿ, ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾಳೆಗುಂಡಿ ಬಳಿ ಚಲಿಸುತ್ತಿದ್ದ ತಾಳಗುಪ್ಪ- ಮೈಸೂರು (ಕುವೆಂಪು ಎಕ್ಸ್ ಪ್ರೆಸ್ ) ರೈಲಿಗೆ ಸಿಲುಕಿ ಕಾಡುಕೋಣವೊಂದು ಮೃತಪಟ್ಟಿದೆ.

ಈ ಘಟನೆ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಸಂಭವಿಸಿದೆ. ಮೇವು ಅರಸಿ ಕಾಡಿನಿಂದ ಹೊರ ಬಂದಿದ್ದು, ಈ ವೇಳೆ ಮಂಗಳವಾರ ರಾತ್ರಿ ರೈಲುಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಕಾನೂನುಬದ್ಧವಾಗಿ ಕಾಡುಕೋಣದ ಅಂತ್ಯಕ್ರಿಯೆ ಕೈಗೊಂಡಿದ್ದಾರೆ.

ಕೆಎಲ್ ಇ ಮಹಾವಿದ್ಯಾಲಯದಿಂದ ಭಜನೆ ಸ್ಪರ್ಧೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button