Belagavi NewsBelgaum NewsKannada NewsKarnataka News

ಕುವೆಂಪುನಗರ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ‌ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದ ವತಿಯಿಂದ ಕುವೆಂಪು ನಗರದ ಚಿಕ್ಕುಬಾಗ್ ಹಾಗೂ ಪಾರ್ವತಿ ಲೇಔಟ್ ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಚಾಲನೆ ನೀಡಿದರು.

 ಕುವೆಂಪು ನಗರದ ರಸ್ತೆ, ಉದ್ಯಾನವನ, ಗಟಾರ, ಯೋಗಾ ಸೆಂಟರ್ ಹಾಗೂ ಫೇವರ್ಸ್ ಅಳವಡಿಕೆಯ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಸಚಿವರು ಗುತ್ತಿಗೆದಾರರಿಗೆ ಸೂಚಿಸಿದರು.

Home add -Advt

ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳು, ಗೀತಾ ಉಸುಲ್ಕರ್, ಪ್ರಿಯಾಂಕಾ ಉಸುಲ್ಕರ್, ಸುನೀತಾ ಉಸುಲ್ಕರ್, ರೇಣುಕಾ ಉಸುಲ್ಕರ್, ಲಕ್ಷ್ಮೀ ಉಸುಲ್ಕರ್, ಮಾಲನ್ ಉಸುಲ್ಕರ್, ನೂತನ್ ಉಸುಲ್ಕರ್, ಮಾಧುರಿ ಬಂಡಾಚೆ, ಸೋನಾಲಿ ಕಿಲ್ಲೇಕರ್, ಭಾರತಿ ಜೈನಕೋಪ್, ರೋಹಿಣಿ ರಾಜಣ್ಣವರ್, ಶೃತಿ ಬಂಡಿವಾಡೇಕರ್, ದೀಪಾ ಅಥಣಿಕರ್, ರೂಪಾ ಪಾಟೀಲ, ಅಶ್ವಿನಿ ಪಾಟೀಲ, ಜಾಕಲಿನ್ ಫರ್ನಾಂಡೀಸ್, ಉಮಾಕಾಂತ ಯರಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button