Latest

ಒಂದು ಬಿಟ್ ಕಾಯಿನ್ ದರ 51 ಲಕ್ಷ ರೂಪಾಯಿ ಮಾಹಿತಿ ಬಿಚ್ಚಿಟ್ಟ ಸುರ್ಜೇವಾಲ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬಿಟ್ ಕಾಯಿನ್ ಹಗರಣ ಅಂತರಾಷ್ಟ್ರೀಯ ಪ್ರಕರಣವಾಗಿದ್ದು, ಸ್ವಾತಂತ್ರ್ಯಾ ನಂತರದ ಅತಿದೊಡ್ದ ಹಗರಣವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲಾ, ಒಂದು ಬಿಟ್ ಕಾಯಿನ್ ದರ 51 ಲಕ್ಷ ರೂಪಾಯಿ. ಶ್ರೀಕಿ ಬಳಿ ವಶಪಡಿಸಿಕೊಳ್ಳಲಾಗಿದ್ದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಮಿಸ್ ಆಗಿದೆ. ರಾಜ್ಯ ಬಿಜೆಪಿ ಸರ್ಕಾರ ಸಾಕ್ಷಿಗಳನ್ನೇ ಮುಚ್ಚಿ ಹಾಕುತ್ತಿದೆ ಎಂದು ಆರೋಪಿಸಿದರು.

ಡಿಸೆಂಬರ್ 1, 2020 ಮತ್ತು 14 ಏಪ್ರಿಲ್ ನಲ್ಲಿ 5,240 ಕೋಟಿ ರೂಪಾಯಿ ಬಿಟ್ ಕಾಯಿನ್ ಹಣ ವರ್ಗಾವಣೆಯಾಗಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಸ್ವಾತಂತ್ರ್ಯಾ ನಂತರದ ಅತಿ ದೊಡ್ಡ ಹಗರಣ ಇದಾಗಿದ್ದು, ಬಿಜೆಪಿಯೇ ಹೀರೋ ಮತ್ತು ವಿಲನ್ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಬಿಟ್ ಕಾಯಿನ್ ಹಗರಣವನ್ನು ಇಡಿ ಅಥವಾ ಐಟಿ ತನಿಖೆಗೆ ಒಪ್ಪಿಸದೇ ಸರ್ಕಾರ ಸುಮ್ಮನಿರುವುದೇಕೆ? ಬಿಟ್ ಕಾಯಿನ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಿರುವುದೇಕೆ? ಇದರ ಹಿಂದೆ ಯಾರೆಲ್ಲ ಭಾಗಿಯಾಗಿದ್ದಾರೆ? ಸಿಎಂ ಬೊಮ್ಮಾಯಿ ಪಾತ್ರವೇನು? ಪ್ರಕರಣದ ತನಿಖೆಯನ್ನು ನಡೆಸಲು ಸಾಧ್ಯವಿಲ್ಲ ಆದ್ದರಿಂದ ಸುಪ್ರೀಂ ಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆಯಲಾಗಿದ್ದರು ಮೌನವಹಿಸಿರುವುದೇಕೇ? ಎಂದು ಪ್ರಶ್ನಿಸಿದ್ದಾರೆ.

Home add -Advt

ಬಿಟ್ ಕಾಯಿನ್ ಆರೋಪಿ ಶ್ರೀಕಿ ಜೊತೆ ಸಂಪರ್ಕವಿತ್ತು, ಆದರೆ…. ಎಂದ ನಲಪಾಡ್

Related Articles

Back to top button