Latest

ಬಿಟ್ ಕಾಯಿನ್, ಹ್ಯಾಕಿಂಗ್ ಬಗ್ಗೆ ಆರೋಪಿ ಶ್ರೀಕಿ ಬಾಯ್ಬಿಟ್ಟ ಸತ್ಯವೇನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೋಟೆಲ್ ನಲ್ಲಿ ಪುಂಡಾಟ ನಡೆಸಿ ಪೊಲೀಸರ ಬಲೆಗೆ ಬಿದ್ದಿರುವ ಬಿಟ್ ಕಾಯಿನ್ ಆರೋಪಿ, ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪೊಲೀಸ್ ವಿಚಾರಣೆ ವೇಳೆ ತನ್ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.

ಮೂಲತ: ಬೆಂಗಳೂರಿನ ಜಯನಗರ ನಿವಾಸಿಯಾಗಿರುವ ಶ್ರೀಕಿ, ಗೋಪಾಲ್ ರಮೇಶ್ ಅಹಗೂ ಕೌಸಲ್ಯ ದಂಪತಿ ಪುತ್ರ. ಬಾಲ್ಯದಿಂದಲೇ ಕಂಪ್ಯೂಟರ್ ಟೆಕ್ನಾಲಜಿ ಬಗ್ಗೆ ತೀವ್ರ ಕೌಶಲ್ಯ ಹೊಂದಿದ್ದ. 4ನೇ ತರಗತಿ ಓದುವಾಗಲೇ ವೆಬ್ ಟೆಕ್ನಾಲಜಿ ಬಗ್ಗೆ ಒಲವು ಹೊಂದಿದ್ದ. ಗೇಮ್ ಸೃಷ್ಟಿ, ರಿವರ್ಸ್ ಇಂಜಿನಿಯರಿಂಗ್ ಬಗ್ಗೆ ತಿಳಿದುಕೊಂಡಿದ್ದ. ಚಿಕ್ಕಂದಿನಿಂದಲೇ ಹ್ಯಾಕಿಂಗ್ ಬಗ್ಗೆ ಆಸಕ್ತಿ ಹೊಂದಿದ್ದ ಶ್ರೀಕಿ ಐಆರ್ ಎಸ್-ಇಂಟರ್ ನೆಟ್ ರೆಲೇ ಚಾಟ್ ಮೂಲಕ ಹ್ಯಾಕರ್ ಸಂಪರ್ಕ ಸಾಧಿಸಿದ್ದ. 4ನೇ ತರಗತಿ ಓದುತ್ತಿದ್ದಾಗಲೇ ಬ್ಲ್ಯಾಕ್ ಹ್ಯಾಟ್ ಎಂಬ ಹ್ಯಾಕರ್ಸ್ ತಂಡದ ಸದಸ್ಯನಾಗಿದ್ದ. 6 ವರ್ಷಗಳ ಕಾಲ ಅಂದರೆ 0ನೇ ತರಗತಿವರೆಗೂ ಅದೇ ತಂದದಲ್ಲಿದ್ದ. 8ನೇ ತರಗತಿ ವೇಳೆ ಬ್ಲ್ಯಾಕ್ ಹ್ಯಾಟ್ ತಂಡದ ಅಡ್ಮಿನಿಸ್ಟ್ರೇಟರ್ ಆಗಿ ಪ್ರಮೋಷನ್ ಕೂದ ಪಡೆದುಕೊಂಡಿದ್ದಾಗಿ ಹೇಳಿದ್ದಾನೆ.

ರೋಸ್, ಬಿಗ್ ಬಾಸ್ ಎಂಬ ಹೆಸರಿನ ಮೂಲಕ ಟೀಂ ಲೀಡ್ ಮಾಡುತ್ತಿದ್ದ. ಸದಸ್ಯರ ವೈಮನಸ್ಸಿನಿಂದಾಗಿ ಬ್ಲ್ಯಾಕ್ ಹ್ಯಾಟ್ ವಿಭಾಗವಾಗಿತ್ತು. ಬಳಿಕ ಬೇರೊಂದು ತಂಡದೊಂದಿಗೆ ಶ್ರೀಕಿ ಹ್ಯಾಕಿಂಗ್ ಮುಂದುವರೆಸಿದ್ದ. ವಿವಿಪುರಂ ಖಾಸಗಿ ಶಾಲೆಯಲ್ಲಿ ಪಿಸಿಎಂಸಿ ವಿಷಯ ಆಯ್ಕೆ ಮಾಡಿಕೊಂದಿದ್ದ ಶ್ರೀಕಿಗೆ ಸ್ನೇಹಿತರ ಸಹವಾಸದಿಂದ ಡ್ರಗ್ಸ್, ಡ್ರಿಂಕ್ಸ್, ಸ್ಮೋಕಿಂಗ್ ದುಶ್ಚಟಗ ಅಭ್ಯಾಸ ಆರಂಭವಾಗಿತ್ತು. ಹಣಕ್ಕಾಗಿ ಹ್ಯಾಕಿಂಗ್ ಮುಂದುವರೆಸಿದ್ದ. ಈ ಸಮಯದಲ್ಲಿಯೇ ಪೇಪಾಲ್ ಮನಿ ಟ್ರಾನ್ಸ್ ಫರ್ ಅಕೌಂಟ್ ಗೆ ಕನ್ನಾ ಹಾಕಿ ಆಸ್ಟ್ರೇಲಿಯಾದ ತನ್ನ ಸ್ನೇಹಿತ ಶಾನೆ ಡುಫೈ ಜತೆ ಸೇರಿ ಮೊದಲ ಬಾರಿ ಹ್ಯಾಕ್ ಮಾಡಿದ್ದ. ಬಳಿಕ ಗೇಮಿಂಗ್ ಆಪ್ ಗಳನ್ನು ಹ್ಯಾಕ್ ಮಾಡಲು ಆರಂಭಿಸಿದ್ದ. ನಂತರ ದಿನಗಳಲ್ಲಿ ಸ್ಟಾರ್ ಹೊಟೆಲ್ ಗಳಲ್ಲಿ ಬಿಟ್ ಕಾಯಿನ್ ಅಬೇಸ್ ಮಾಡುತ್ತಿದ್ದ.

ಕಾಲೇಜು ದಿನಗಳಲ್ಲೇ ಬಿಟ್ ಕಾಯಿನ್ ದಂಧೆ ಬಗ್ಗೆ ಅರಿವಿದ್ದ ಶ್ರೀಕಿ ಬಿಟ್ ಕಾಯಿನ್ ಏಜೆನ್ಸಿಗಳನ್ನು ಹ್ಯಾಕ್ ಮಾಡುತ್ತಿದ್ದ ಡಾರ್ಕ್ ನೆಟ್ ಮೂಲಕ ಬಿಟ್ ಕಾಯಿನ್ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ. ಆನ್ ಲೈನ್ ಮನಿ ಟ್ರಾನ್ಸ್ ಫರ್ ಏಜೆನ್ಸಿಗಳನ್ನು ಟಾರ್ಗೆಟ್ ಮಾಡುತ್ತ ಐಷಾರಾಮಿ ಜೀವನ ನಡೆಸುತ್ತಾ ದುಂದುವೆಚ್ಚ ಮಾಡುತ್ತಿದ್ದ. ವಿಚಾರಣೆ ವೇಳೆ ಶ್ರೀಕಿ ಪೊಲೀಸರ ಮುಂದೆ ಈ ವಿಚಾರ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಪರಿಷತ್ ಚುನಾವಣೆ; ಬೆಳಗಾವಿಯಲ್ಲಿ ಕಾಂಗ್ರೆಸ್ ಟೆಕೆಟ್ ಗಾಗಿ ಆಕಾಂಕ್ಷಿಗಳ ಲಾಬಿ ಆರಂಭ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button