Kannada NewsLatestPoliticsWorld

*ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿಟ್ರನ್ ಪ್ರಧಾನಿ*

ಪ್ರಗತಿವಾಹಿನಿ ಸುದ್ದಿ: ಬ್ರಿಟನ್ ಪ್ರಧಾನಿ ಹಾಗೂ ಲೇಬರ್ ಪಾರ್ಟಿಯ ನಾಯಕರಾದ ಕೈರ್ ಸ್ವಾರ್ಮರ್ ಅವರು ತಮ್ಮ ಸ್ಥಾನಕ್ಕೆ ಧೀಡಿರ್ ರಾಜೀನಾಮೆ ಘೋಷಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಲಂಡನ್‌ನ ಪ್ರಧಾನಿ ಅಧಿಕೃತ ನಿವಾಸ ’10 ಡೌನಿಂಗ್ ಸ್ಟ್ರೀಟ್ ಮುಂಭಾಗ  ಭಾಷಣ ಮಾಡಿದ ಅವರು, ತಾವು ಅಧಿಕಾರದಿಂದ ಕೆಳಗಿಳಿಯುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ನಾನು ಪ್ರಧಾನಿ ಹುದ್ದೆಯಲ್ಲಿದ್ದಾಗ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ಸಹ ನಾನು ಅತ್ಯಂತ ಪ್ರೀತಿಯಿಂದ ಗೌರವಿಸುವ ನನ್ನ ದೇಶಕ್ಕೆ ಮೊದಲ ಆದ್ಯತೆ ನೀಡುವುದೇ ಆಗಿತ್ತು” ಎಂದಿದ್ದಾರೆ.

ಇದೇ ವೇಳೆ ತಮ್ಮ ಯಶಸ್ಸಿನ ಬೆನ್ನೆಲುಬಾಗಿ ನಿಂತ ಕುಟುಂಬವನ್ನು ನೆನೆದ ಅವರು, “ನನ್ನ ಅದ್ಭುತ ಪತ್ನಿ ‘ವಿಕ್’ ಅವರಿಗೆ ಧನ್ಯವಾದಗಳು. ಆಕೆ ನನ್ನ ಜೀವನದ ಪ್ರತಿ ಹಂತದಲ್ಲೂ ದೊಡ್ಡ ಶಕ್ತಿಯಾಗಿ ನಿಂತಿದ್ದಾಳೆ. ಇನ್ನುಳಿದ ಜೀವನದಲ್ಲಿ ನನ್ನ ಹೆಮ್ಮೆಯ ಹಾಗೂ ಸಂತೋಷದ ಮೂಲವಾಗಿರುವ ನನ್ನ ಮುದ್ದಿನ ಮಕ್ಕಳಿಗೆ ಒಬ್ಬ ಉತ್ತಮ ತಂದೆಯಾಗಿ ಇರಲು ನಾನು ಬಯಸುತ್ತೇನೆ” ಎಂದು ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಜೀನಾಮೆ ನೀಡಿ ಅತ್ಯಂತ ಭಾವುಕರಾಗಿ ಮಾತನಾಡಿದ ಕೈರ್ ಸ್ವಾರ್ಮರ್, ತಮ್ಮ ಅಧಿಕಾರಾವಧಿಯ ನಿರ್ಧಾರಗಳನ್ನು ಸಮರ್ಥಿಸಿಕೊಂಡರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button