ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿಧಾನ ಸಭೆ ಚುನಾವಣೆಗೆ ಇನ್ನು 6 -7 ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ದೊಡ್ಡದೊಂದು ವಿಷಯ ಸದ್ದು ಮಾಡುತ್ತಿದೆ.
ಪಕ್ಷೇತರ ಸಂಸದೆ ಸುಮಲತಾ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡಿರುವ ಬೆನ್ನಲ್ಲೇ, ಮಾಜಿ ಸಂಸದೆ ರಮ್ಯಾ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಪರಸ್ಪರರ ನಿರ್ಧಾರಕ್ಕಾಗಿ ಇಬ್ಬರೂ ಕಾಯುತ್ತಿದ್ದಾರೆ.
ಸುಮಲತಾ ಅವರನ್ನು ಬಿಜೆಪಿಗೆ ಸೆಳೆಯಲು ಸಾಕಷ್ಟು ಪ್ರಯತ್ನ ನಡೆದಿತ್ತು. ಆದರೆ ಅವರು ಬಿಜೆಪಿ ಸೇರಲು ಒಲವು ತೋರಿಸುತ್ತಿಲ್ಲ. ಸ್ವಲ್ಪ ದಿನ ಬಿಟ್ಟು ಅವರು ಕೆಲವು ಷರತ್ತಿನ ಮೇಲೆ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಸುಮಲತಾ ಬಿಜೆಪಿ ಸೇರದಿದ್ದರೆ ತಾವು ಬಿಜೆಪಿಗೆ ಬರುವುದಾಗಿ ರಮ್ಯಾ ಬಿಜೆಪಿ ವರಿಷ್ಟರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ಈ ಬೆಳವಣಿಗೆ ಮೈಸೂರು ಭಾಗದಲ್ಲಿ ಎರಡೂ ಪಕ್ಷಗಳಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಇವರಿಬ್ಬರ ನಿರ್ಧರದ ಮೇಲೆ ಇನ್ನೂ ಹಲವು ಮಹತ್ತರ ಬದಲಾವಣೆಗಳಾಗುವ ಸಾಧ್ಯತೆ ಇದೆ.
ಸಚಿವ ಸ್ಥಾನ ಸಿಗದಿರುವುದಕ್ಕೇ ಪ್ರತಿಭಟಿಸಿ ನಾನು ಸದನಕ್ಕೆ ಹೋಗುತ್ತಿಲ್ಲ ; ನೇರವಾಗಿ ಹೇಳಿಕೆ ನೀಡಿದ ಕೆ.ಎಸ್.ಈಶ್ವರಪ್ಪ
https://pragati.taskdun.com/politics/k-s-eshwarappareactionvidhanamandala-sessionabsence/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ