ಗ್ರುಪ್ ನಲ್ಲಿ ಪೋಸ್ಟ್ ಆದ ಬಿಜೆಪಿ ಜಿಲ್ಲಾಧ್ಯಕ್ಷನ ನಗ್ನ ಫೋಟೋ; ಶಶಿಕಾಂತ ಪಾಟೀಲ ಹೇಳೋದೇನು ಗೊತ್ತೆ?
ಪ್ರಗತಿವಾಹಿನಿಗೆ ಶಶಿಕಾಂತ ಪಾಟೀಲ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಶಶಿಕಾಂತ ಪಾಟೀಲ ಅವರ ನಗ್ನ ಫೋಟೋವೊಂದು ಬಿಜೆಪಿ ಕಾರ್ಯಕರ್ತರ ಗ್ರುಪ್ ನಲ್ಲಿ ಕಾಣಿಸಿಕೊಂಡು ದೊಡ್ಡ ಅವಾಂತರಕ್ಕೆ ಕಾರಣವಾಗಿದೆ.
3 -4 ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಶಶಿಕಾಂತ ಪಾಟೀಲ ಅವರ ಬೆತ್ತಲೆ ಫೋಟೋ ಬಿಜೆಪಿ ದಕ್ಷಿಣ ಮಂಡಲ ಗ್ರುಪ್ ನಲ್ಲಿ ಅವರದೇ ಮೊಬೈಲ್ ನಿಂದ ಪೋಸ್ಟ್ ಆಗಿದೆ. ಅದು ಅವರ ಗಮನಕ್ಕೆ ಬರುವಷ್ಟರಲ್ಲಿ ಕೆಲವರು ಶೇರ್ ಮಾಡಿದ್ದಾರೆ. ಗ್ರುಪ್ ನಲ್ಲಿದ್ದ ಮಹಿಳೆಯರು ಮುಜುಗರವಾಗಿ ಗ್ರುಪ್ ನಿಂದ ಹೊರಬಿದ್ದರೆ, ಅಡ್ಮಿನ್ ಗಮನಕ್ಕೆ ಬರುತ್ತಿದ್ದಂತೆ ಗ್ರುಪ್ ಡಿಲೀಟ್ ಮಾಡಿದ್ದಾರೆ.
ಶಶಿಕಾಂತ ಪಾಟೀಲ ಗೋವಾ ಚುನಾವಣೆ ಪ್ರಚಾರದಲ್ಲಿದ್ದು ಅಲ್ಲಿನ ಹೊಟೆಲ್ ಒಂದರಲ್ಲಿ ತೆಗೆದ ಫೋಟೋ ಇದು ಎನ್ನುವ ಸುದ್ದಿ ಹರಡಿದೆ.
ಏನಂದ್ರು ಶಶಿಕಾಂತ ಪಾಟೀಲ?
ಈ ಕುರಿತು ಪ್ರಗತಿವಾಹಿನಿ ಜೊತೆ ಮಾತನಾಡಿದ ಶಶಿಕಾಂತ ಪಾಟೀಲ, ಇದು ಬೈ ಮಿಸ್ಟೇಕ್ ಆಗಿರುವ ಘಟನೆ. ಹೇಗೆ ಫೋಟೋ ಹೋಗಿದೆ ನನಗೇ ತಿಳಿಯುತ್ತಿಲ್ಲ ಎಂದಿದ್ದಾರೆ. ಇದು ಗೋವಾದಲ್ಲಿ ತೆಗೆದ ಫೋಟೋವಲ್ಲ. ಮನೆಯಲ್ಲೇ ಮಸಾಜ್ ಮಾಡಿಕೊಂಡು ಮಲಗಿದ್ದೆ. ಪಕ್ಕದಲ್ಲೇ ಮೊಬೈಲ್ ಇಟ್ಟಿದ್ದೆ. ಆದರೆ ಹೇಗೆ ಫೋಟೋ ಕ್ಲಿಕ್ ಆಗಿದೆ, ಹೇಗೆ ಗ್ರುಪ್ ಗೆ ಹೋಗಿದೆ ನನಗೇ ತಿಳಿಯುತ್ತಿಲ್ಲ ಎಂದು ಅವರು ಹೇಳಿದರು.
ಈ ಸಂಬಂಧ ಬಿಜೆಪಿ ಕೋರ್ ಕಮಿಟಿಯಿಂದ ವಿವರಣೆ ಕೇಳಿದ್ದು, ಆಕಸ್ಮಿಕವಾಗಿ ಆಗಿರುವ ಘಟನೆ ಎನ್ನುವ ವಿವರಣೆ ಕೊಡಲಿದ್ದೇನೆ ಎಂದರು.
ಈ ಸಂಬಂಧ ಶಾಸಕ ಅಭಯ ಪಾಟೀಲ ಅವರನ್ನು ಪ್ರಶ್ನಿಸಿದಾಗ, ಶಶಿಕಾಂತ ಪಾಟೀಲ ಅಂತಹ ಮುನುಷ್ಯರಲ್ಲ. ಅವರು ಇಂತಹ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಸಿಪಿಐ ಪಿ.ಆರ್.ರಾಘವೇಂದ್ರ ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ