ನೂತನ ಕಾರ್ಯಕರ್ತರ ಆಗಮನದಿಂದ ಬಿಜೆಪಿಗೆ ಮತ್ತಷ್ಟು ಬಲ: ಸಂಸದ ಅಣ್ಣಾಸಾಹೇಬ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳು ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಮಾಡಿರುವ ಚಿಕ್ಕೋಡಿ ಕ್ಷೇತ್ರದಲ್ಲಿ 8810 ಕೋಟಿ ಅಧಿಕ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಮಂಗಳವಾರ ನಿಪ್ಪಾಣಿ ಮತಕ್ಷೇತ್ರದ ಚಾಂದಶಿರದವಾಡ ಗ್ರಾಮದ ಹಲವರು ಬಿಜೆಪಿ ಸೇರಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ ಖೋತ ಅವರ ಮುಂದಾಳತ್ವದಲ್ಲಿ ಸಂದೀಪ ಖೋತ, ಸಚೀನ ಖೋತ, ಬಸವರಾಜ ಕುಡಚೆ, ರಾಕೇಶ ಖೋತ, ಅಭಿಷೇಕ ಪಾಟೀಲ, ಆದರ್ಶ ಖೋತ, ಸುನೀಲ ಸುತಾರ ಸಂಜಯ ರೋಹಿದಾಸ ಸುರಜ ರೋಹಿದಾಸ ಸಂಜಯ ಸ್ವಾಮಿ ಶಿವರಾಜ ಖೋತ ಕಲ್ಲಪ್ಪ ಖೋತ ಹಾಗೂ ದೇವಾ ಗ್ರೂಪ್ ನ ಎಲ್ಲ ಯುವಕರು, ಕಾರ್ಯಕರ್ತರು ಇತರೆ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಆತ್ಮೀಯವಾಗಿ ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ಈ ಸಂದರ್ಭದಲ್ಲಿ ಅಣ್ಣಪ್ಪ ಪಾಟೀಲ, ಸಂಜಯ ಪಾಟೀಲ, ಶೀತಲ ಲಡಗೆ ಅಜೀತ ತೊಡಕರ ಅನಿಲ ಪೂಜಾರಿ ಅಮರ ಕಾಂಬಳೆ ಮಹಾವೀರ ಲಡಗೆ ಜವೇದ ಮುಜಾವರ ಶೀತಲ ಪಾಟೀಲ ಸುಭಾಷ ಪಾಟೀಲ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ