Cancer Hospital 2
Beereshwara 33
LaxmiTai 5

ಬಿಜೆಪಿಯನ್ನು ಜನ ಧಿಕ್ಕರಿಸಿದ್ದಾರೆ: ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ, ಇಂಡಿಯಾ ಮೈತ್ರಿಕೂಟವೂ ಸರ್ಕಾರ ರಚನೆಗೆ ಕಸರತ್ತು ನಡೆಸಿ ಮಹತ್ವದ ನಿರ್ಣಯ ಕೈಗೊಂಡಿದೆ. ಸಭೆಯಲ್ಲಿ ಸರ್ಕಾರ ರಚನೆ ಹಾಗೂ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.

ಇನ್ನು ಬಿಜೆಪಿಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ಬಾರದಿರುವುದು ಜನ ಅವರನ್ನು ಧಿಕ್ಕರಿಸಿದ್ದಾರೆ ಎಂದು ಸಭೆಯಲ್ಲಿ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಈ ಚುನಾವಣೆಯ ಫಲಿತಾಂಶದಿಂದ ಮೋದಿ ಅವರಿಗೆ ನೈತಿಕ ಸೋಲು ಮತ್ತು ವೈಯಕ್ತಿಕವಾಗಿ ರಾಜಕೀಯ ನಷ್ಟವಾಗಿದೆ ಎಂದಿದ್ದಾರೆ. ಇನ್ನು ಜನಾದೇಶವನ್ನು ಬುಡಮೇಲು ಮಾಡಲು ಎನ್​​ಡಿಎ ನಿರ್ಧರಿಸಿದೆ ಎಂದಿದ್ದಾರೆ.

Emergency Service

ಇಂಡಿಯಾ ಸಭೆಯಲ್ಲಿ ಹಾಜರಾಗಿದ ನಾಯಕರ ಪಟ್ಟಿ

ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೇಣುಗೋಪಾಲ್, ಎನ್ ಸಿ ಪಿ ಮುಖ್ಯಸ್ಥ, ಶರದ್ ಪವಾರ್, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಡಿಎಂಕೆ ನಾಯಕ ಎಂ.ಕೆ.  ಸ್ಟಾಲಿನ್, ಡಿಎಂಕೆ ನಾಯಕ, ಟಿ.ಆರ್.  ಬಾಲು, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಎಸ್ಪಿ ಮುಖಂಡ ರಾಮಗೋಪಾಲ್ ಯಾದವ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಭಿಷೇಕ್ ಬ್ಯಾನರ್ಜಿ (AITC), ಅರವಿಂದ್ ಸಾವಂತ್ SS(UBT) ತೇಜಸ್ವಿ ಯಾದವ್ (RJD),  ಸಂಜಯ್ ಯಾದವ್ (RJD), ಸೀತಾರಾಮ್ ಯೆಚೂರಿ ಸಿಪಿಐ(ಎಂ) ಸಂಜಯ್ ರಾವುತ್ SS(UBT), ಡಿ.ರಾಜ (cpi), ಚಂಪೈ ಸೊರೆನ್ (JMM),  ಕಲ್ಪನಾ ಸೊರೆನ್ (jmm), ಸಂಜಯ್ ಸಿಂಗ್ (AA), ರಾಘವ್ ಚಡ್ಡಾ (AAP) ದೀಪಂಕರ್ ಭಟ್ಟಾಚಾರ್ಯ ಸಿಪಿಐ(ಎಂಎಲ್), ಒಮರ್ ಅಬ್ದುಲ್ಲಾ (JKNC), ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಗಳ್ (IUML), ಪಿ.ಕೆ. ಕುನ್ಹಾಲಿಕುಟ್ಟಿ (IUML), ಜೋಸ್ ಕೆ. ಮಣಿ ಕೆಸಿ(ಎಂ) ಸೇರಿದಂತೆ ಅನೇಕರು ಇದ್ದರು. 

Bottom Add3
Bottom Ad 2