Kannada NewsKarnataka NewsLatest

ಪ್ರಪಂಚದಲ್ಲಿಯೆ ಅತಿಹೆಚ್ಚು ಕಾರ್ಯಕರ್ತರನ್ನು ಹೊಂದಿದ ಸಮರ್ಥ ಪಕ್ಷ ಬಿಜೆಪಿ – ಮಾಮನಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕಾರ್ಯಕರ್ತರ ಸಹನೆ, ಸಹಕಾರ ಹಾಗೂ ಅವರ ನಿಸ್ವಾರ್ಥ ಸೇವೆಯಿಂದ ಬಿಜೆಪಿ ಪಕ್ಷ ಇಂದು ಪ್ರಪಂಚದಲ್ಲಿಯೆ ಅತಿಹೆಚ್ಚು ಕಾರ್ಯಕರ್ತರನ್ನು ಹೊಂದಿದ ಸಮರ್ಥ ಪಕ್ಷ ಎನ್ನುವದು ಜಗಜ್ಜನಿತವಾಗಿದೆ ಎಂದು ಉಪಸಭಾಪತಿ ಆನಂದ ಮಾಮನಿ ಹೇಳಿದರು.
ನಗರದ ಗೋಮಟೇಶ್ವರ ಸಭಾ ಭವನದಲ್ಲಿ ಶನಿವಾರ ನಡೆದ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ವರ್ಚುವಲ್ ಸಭೆಯನ್ನು ಉದ್ಘಾಟಸಿ ಮಾತನಾಡಿ, ಚುನಾವಣೆಗೆ ಮಾತ್ರ ಸೀಮಿತವಾಗದೆ ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸುವದೆ ಪಕ್ಷದ ಸಿದ್ದಾಂತವಾಗಿದೆ. ಬಿಡುವಿಲ್ಲದೆ ದೇಶದ ಜನರ ಸೇವೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಕೊವಿಡ್-19 ಸಂದರ್ಭದಲ್ಲಿ ಸ್ವದೇಶಿ ನಿರ್ಮಿತ ವ್ಯಾಕ್ಸಿನ್, ಮಾಸ್ಕ್ ಹಾಗೂ ಕೊವಿಡ್ ದಿಂದ ರಕ್ಷಿಸುವ ಸಾಮಗ್ರಿಗಳು ಹಾಗೂ ಆಮ್ಲಜನಕ ಘಟಕಗಳ ಉತ್ಪಾದನೆಗೆ ಕ್ರಮ ಕೈಗೊಂಡು ಸ್ವಾವಲಂಬನೆಯ ಸ್ವಾಭಿಮಾನ ಭಾರತ ನಿರ್ಮಾಣ ಮಾಡಿದ ಪ್ರಧಾನಿಗಳ ಕಾರ್ಯ ಶ್ಲಾಘನೀಯ ಎಂದರು.
ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪನವರ ನೆತೃತ್ವದ ರಾಜ್ಯ ಸರ್ಕಾರ ಕೊವಿಡ್ ರೋಗ ತಡೆಗಟ್ಟಲು ದಿಟ್ಟಕ್ರಮ ತೆಗೆದುಕೊಂಡು ಮೃತರಾದ ಬಿಪಿಎಲ್ ಕುಟುಂಬದ ಓರ್ವರಿಗೆ ಲಕ್ಷ ರೂಪಾಯಿ ಅನುದಾನ,
ಲಾಕ್ ಡೌನದಿಂದ ತತ್ತರಿಸಿದ ನೇಕಾರರಿಗೆ, ತರಕಾರಿ, ಹೂ ಬೆಳೆಗಾರ ರೈತರಿಗೆ, ಬಿದಿ ವ್ಯಾಪಾರಸ್ಥರಿಗೆ, ಕಾರ್ಮಿಕ ಮತ್ತು ಚಾಲಕ ವರ್ಗಕ್ಕೆ ಪರಿಹಾರ ಕೊಡಲು ದಿಟ್ಟ ಕ್ರಮ ಕೈಗೊಂಡು ಸಂಕಷ್ಟದಲ್ಲಿದ್ದ ಜನತೆಗೆ ಆಸರೆಯಾಗಿದ್ದಾರೆ ಎಂದರು.
ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿ, ಕೊವಿಡ್ ಸಂದರ್ಭದಲ್ಲಿ ಅನೇಕರನ್ನ ಕಳೆದುಕೊಂಡ ದುಃಖದಲ್ಲಿ ನಾವಿದ್ದರು ಸಂಕಷ್ಟದ ಜನರ ಕಣ್ಣಿರು ಒರೆಸಲು ನಾವು ಸನ್ನದ್ದರಾಗಲೇಬೇಕಾಗಿದೆ. ಜೀವದ ಹಂಗುತೊರೆದು ಬಿಜೆಪಿ ಕಾರ್ಯಕರ್ತರು ಕಿಟ್, ದಿನಸಿ ಪದಾರ್ಥ ಹಾಗೂ ಔಷಧಿ ವ್ಯಾಕ್ಸಿನ್ ಜೀವ ರಕ್ಷಕ ಸಾಮಾಗ್ರಿಗಳನ್ನು ವಿತರಿಸಿ ಮಾನವೀಯ ಮೌಲ್ಯ ಕಾಪಾಡಿದ ಕಿರ್ತಿ ನಮ್ಮ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಹೇಶ ತೆಂಗಿನಕಾಯಿ,
ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ್, ಕು.ಉಜ್ವಲಾ ಭಡವಣಾಚೆ, ಮಹೇಶ ಮೊಹಿತೆ, ಸಂದೀಪ್ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ ವಿವಿಧ ಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಶಿಕಾಂತ ನಾಯ್ಕ, ಯುವರಾಜ ಜಾಧವ, ಪ್ರೇಮಾ ಭಂಡಾರಿ, ಬಸವರಾಜ ಹಿರೇಮಠ, ಗುರು ಮೆಟಗುಡ್, ಸಂಜಯ ಕಂಚಿ, ಮುತ್ತೆಪ್ಪ ಮನ್ನಾಪೂರ, ಪ್ರಮೊದ ಕಚೊರಿ, ಶ್ಯಾಮಾನಂದ ಪೂಜಾರ, ಸಂತೋಷ ದೇಶನೂರ, ವೀರಭದ್ರಯ್ಯ ಪೂಜಾರ, ವಾಸಂತಿ ಬಡಿಗೇರ, ಮಾರುತಿ ಕೊಪ್ಪದ, ರಂಜನಾ ಕೊಲಕಾರ, ಮಲ್ಲೆಶ್ವರ ಸುಳೇಭಾಂವಿ ಹಾಗೂ ವರ್ಚುವಲ್ ಮೂಲಕ ಎಲ್ಲ ಮಂಡಳ ಪದಾಧಿಕಾರಿಗಳು ಇದ್ದರು.
ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ ಸ್ವಾಗತಿಸಿದರು. ರತ್ನಾ ಗೊಧಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button