ಮನಸ್ಸಿಗೆ ಬಂದಂತೆ ಸರ್ಕಾರ ನಡೆಸಿದ್ರೆ ಆಗಲ್ಲ; ರಾಜ್ಯದ ಜನ ಕೇಸರೀಕರಣ ಮಾಡಲು ಹೇಳಿದ್ದಾರಾ? ಸಿದ್ದರಾಮಯ್ಯ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಹಚ್ಚಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಶಿಕ್ಷಕರ ನೇಮಕ, ಪಠ್ಯಪುಸ್ತಕ ವಿತರಣೆ ಮಾಡುವ ಬದಲು ಶಾಲೆಗಳಿಗೆ ಕೇಸರಿ ಬಣ್ಣ ಹಚ್ಚಲು ಸರ್ಕಾರ ಹೊರಟಿದೆ. ಏನು ರಾಜ್ಯದ ಜನ ಹೇಳಿದ್ದಾರಾ? ಎಂದು ಕಿಡಿ ಕಾರಿದ್ದಾರೆ.
ಜನಪರ ಆಡಳಿತ ನಡೆಸುತ್ತೀವೆ ಎಂದು ಹೇಳುವ ಬಿಜೆಪಿ ನಾಯಕರು ಈಗ ತಮ್ಮ ನಸ್ಸಿಗೆ ಬಂದಂತೆ ಆಡಲಿತ ನಡೆಸುತ್ತಿದ್ದಾರೆ. ಈಗ ಶಾಲೆಗಳಿಗೆ ಕೇಸರಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಇದೇನು ಬಿಜೆಪಿ ದುಡ್ಡಾ? ಜನರ ದುಡ್ದು. ಜನರ ದುಡ್ಡನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಲು ಶಾಲೆಗಳನ್ನು ಕೇಸರೀಕರಣ ಮಾಡಲು ರಾಜ್ಯದ ಜನರು ಹೇಳಿದ್ದಾರಾ? ಎಂದು ಗುಡುಗಿದ್ದಾರೆ.
ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಬಾಯಿಗೆ ಬಂದಂತೆ ಮಾತನಾಡುತ್ತಾ ಆಡಳಿತ ನಡೆಸುತ್ತಿದೆ. ಮನಸ್ಸಿಗೆ ಬಂದಂತೆ ಸರ್ಕಾರ ನಡೆಸೋದಲ್ಲ. ಇದು ಜನ ವಿರೋಧಿ ನೀತಿಯಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಕಿ ಬೈದಿದ್ದಕ್ಕೆ SSLC ವಿದ್ಯಾರ್ಥಿನಿ ಆತ್ಮಹತ್ಯೆ
https://pragati.taskdun.com/latest/sslc-studentsuicidebngalore/