Latest

ರಾತ್ರಿಯಿಡೀ ಸದನದಲ್ಲೇ ಮಲಗಿದ ಬಿಜೆಪಿ ಶಾಸಕರು

 ಸದನದಲ್ಲೇ ನಿದ್ರಿಸಿದ ಬಿಜೆಪಿ ಶಾಸಕರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿಶ್ವಾಸಮತ ಯಾಚನೆಗೆ ಸರಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾಪಾರ್ಟಿಯ ಶಾಸಕರು ವಿಧಾನಸಭೆಯಲ್ಲೇ ರಾತ್ರಿಯಿಡೀ ಮಲಗಿ ಪ್ರತಿಭಟನೆ ನಡೆಸಿತು.

ವಿರೋಧ ಪಕ್ಷದ ನಾಯಕರೂ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲ ಶಾಸಕರೂ ಅಲ್ಲೇ ಊಟ ಮಾಡಿ ನಿದ್ದೆ ಮಾಡಿದರು.

ಬಿಜೆಪಿ ಸದನದಲ್ಲೇ ಮಲಗುವ ನಿರ್ಧಾರವನ್ನು ಸಂಜೆಯೇ ಅಧಿವೇಶನದಲ್ಲಿ ಪ್ರಕಟಿಸಿತ್ತು.

Home add -Advt

ಶುಕ್ರವಾರ ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಯಾಚಿಸುವಂತೆ ರಾತ್ರಿ ರಾಜ್ಯಪಾಲ ವಜುಬಾಯಿವಾಲಾ  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಸೂಚಿಸಿದ್ದಾರೆ.

 

 

 

 

 

 

ಆದರೆ ರಾಜ್ಯಪಾಲರ ಸೂಚನೆ ವಿರೋಧಿಸಿ ಮುಖ್ಯಮಂತ್ರಿ ಸುಪ್ರಿಂ ಕೋರ್ಟ್ ಕದ ತಟ್ಟುವ ಸಾಧ್ಯತೆ ಇದೆ. ಹಾಗಾಗಿ ಇಂದಿನ ರಾಜಕೀಯ ಬೆಳವಣಿಗೆಗಳು ಭಾರೀ ಕುತೂಹಲ ಮೂಡಿಸಿವೆ.

Related Articles

Back to top button