Latest

ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದುಂಡಾವರ್ತಿ

ಪ್ರಗತಿವಾಹಿನಿ ಸುದ್ದಿ, ಚೆನ್ನೈ:  ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ಯಾವುದೇ ಅನುಮತಿಯಿಲ್ಲದೆ ತೆರೆದು ದುಂಡಾವರ್ತಿ ತೋರಿದ ಘಟನೆ ನಡೆದಿದೆ.

ಘಟನೆ ಕಳೆದ ವರ್ಷದ ಡಿ.10 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಸದರ ನಡವಳಿಕೆಗೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಘಟನೆಯ ನಂತರ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ಸುಮಾರು ಎರಡು ಗಂಟೆಗಳ ಕಾಲ ಪರಿಶೀಸಲಾಗಿದೆ. ಇದರ ನಂತರ ಸಂಸದರು ಲಿಖಿತ ಪತ್ರ ಬರೆದು ಕ್ಷಮೆ ಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆಯುವುದು ವಿಮಾನಯಾನ ನಿಯಮಗಳ ಗಂಭೀರ ಉಲ್ಲಂಘನೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಅದಾಗ್ಯೂ ತೇಜಸ್ವಿ ಸೂರ್ಯ ಆದರೆ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ವಿಮಾನಯಾನ ಸಂಸ್ಥೆ ಇಂಡಿಗೋ ಈ ಕುರಿತು ಮೌನ ತಾಳಿದೆ.

ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಪ್ರಯಾಣಿಕರೊಬ್ಬರು ತೆರೆದಿದ್ದು ನಿಜ ಎಂದು ದೃಢಪಡಿಸಿದ್ದಾರೆ. ಆದರೆ ಆ ಪ್ರಯಾಣಿಕ ಸಂಸದ ತೇಜಸ್ವಿ ಸೂರ್ಯ ಅವರ ಹೆಸರು ಹೇಳಲು ನಿರಾಕರಿಸಿದೆ.

ಸಂಸದ ಕ್ಷಮೆ ಯಾಚಿಸಿದ ನಂತರ, ಅವರಿಗೆ ಅದೇ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಯಿತು. ಆದರೆ ವಿಮಾನದ ಸಿಬ್ಬಂದಿ ಅವರ ಆಸನವನ್ನು ಬದಲಾಯಿಸಿದರೆನ್ನಲಾಗಿದೆ.

ಇಂಡಿಗೋ ವಿಮಾನದಿಂದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ ನಂತರ ಏರ್‌ಲೈನ್ ಅಧಿಕಾರಿಗಳು ತೇಜಸ್ವಿ ಸೂರ್ಯ ಅವರಿಂದ ಲಿಖಿತ ವಿವರ ಕೇಳಿದ್ದಾರೆ ಎಂದು ಚೆನ್ನೈ ವಿಮಾನ ನಿಲ್ದಾಣದ ಮೂಲಗಳು ಖಚಿತಪಡಿಸಿವೆ.

ಸಂಸದರು ತುರ್ತು ನಿರ್ಗಮನದ ಬಾಗಿಲು ತೆರೆದಾಗ ಪ್ರಯಾಣಿಕರು ಭಯಭೀತರಾಗಿದ್ದರು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ಟೀಕೆ:

ಸಂಸದ ತೇಜಸ್ವಿ ಸೂರ್ಯ ವಿಮಾನದ ಸುರಕ್ಷಾ ನಿಯಮಗಳನ್ನು ಗಾಳಿಗೆ ತೂರಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲನ್ನು ತೆರೆದಿದ್ದ  ಘಟನೆಗೆ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಇದೊಂದು ಥರ ಮಕ್ಕಳ ಕೈಯ್ಯಲ್ಲಿ ಆಟಿಕೆ ಸಾಮಾನು ನೀಡಿದಂತಾಗಿದೆ ಎಂದು ಲೇವಡಿ ಮಾಡಿದೆ.

ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಬಾಗಿಲು ತೆರೆದ ಸಂದರದ ಉದ್ದೇಶವೇನಿತ್ತು? ಸರಕಾರ ಇದನ್ನೇಕೆ ಮುಚ್ಚಿಟ್ಟಿದೆ?  ನಂತರ ಕ್ಷಮಾಪಣೆ ಕೋರಿ ಹಿಂದಿನ ಸೀಟಿಗೆ ವರ್ಗಾವಣೆಯಾಗಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಒಂದೊಮ್ಮೆ ವಿಮಾನ ಟೇಕಾಫ್ ಆದಾಗ ಬಾಗಿಲು ತೆರೆದಿದ್ದರೆ ಆಗಲಿದ್ದ ಅನಾಹುತಕ್ಕೆ ಯಾರು ಹೊಣೆಯಾಗುತ್ತಿದ್ದರು? ಎಂದು ಸಹ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದೆ.

 

*ಕೋಳಿಗಳನ್ನು ಬಂಧಿಸಿ ಸೆಲ್ ನಲ್ಲಿಟ್ಟ ಪೊಲೀಸರು*

https://pragati.taskdun.com/koppalaraidpolicearresthen/

*ವಿದ್ಯುತ್ ಶಾಕ್; ಬಿಜೆಪಿ ಮುಖಂಡ ದುರ್ಮರಣ*

https://pragati.taskdun.com/electricity-shockbjp-leaderdeathyamakanamaradi/

*ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಲಿದೆ; ಸರ್ಕಾರದಿಂದಲೇ ತಂತ್ರಾಂಶ ಸಿದ್ಧ; ಸಿಎಂ ಬೊಮ್ಮಾಯಿ*

https://pragati.taskdun.com/yuva-sambhashanecm-basavaraj-bommair-v-dental-collegebangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button