Belagavi NewsBelgaum NewsPolitics

*10 ಕ್ಕೂ ಹೆಚ್ಚು ಬಿಜೆಪಿ ರೇಬಲ್ ನಾಯಕರ ಗುಪ್ತ ಮೀಟಿಂಗ್*

ಪ್ರಗತಿವಾಹಿನಿ ಸುದ್ದಿ: ಬಸವನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ, ಅಣ್ಣಾಸಾಹೇಬ ಜೊಲ್ಲೆ, ಕುಮಾರ ಬಂಗಾರಪ್ಪ ಸೇರಿ 10 ಕ್ಕೂ ಹೆಚ್ಚು ಬಿಜೆಪಿ ನಾಯಕರು ಬೆಳಗಾವಿಯ ಹೊರವಲಯದ ಖಾಸಗಿ ಹೋಟಲ್ ನಲ್ಲಿ ಗುಪ್ತಸಭೆ ನಡೆಸುತ್ತಿದ್ದು, ಬಿಜೆಪಿಯ ರೆಬಲ್ಸ್ ನಾಯಕರ ಮೀಟಿಂಗ್ ತೀವ್ರ ಕುತೂಹಲ ಮೂಡಿಸಿದೆ.

ಬೆಳಗಾವಿ ನಗರದ ಹೊರ ವಲಯದಲ್ಲಿರುವ ಖಾಸಗಿ ರಿಸಾರ್ಟ್ ನಲ್ಲಿ ಬಿಜೆಪಿಯ ಅತೃಪ್ತ ನಾಯಕರು ಗುಪ್ತ ಗುಪ್ತ ಸಭೆ ನಡೆಯುತ್ತಿದ್ದು, ಭಾರಿ ಸಂಚಲನ ಸೃಷ್ಠಿಸಿದೆ.‌ ಬಸನಗೌಡ ಯತ್ನಾಳ ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲೇ ಠಿಖಾನಿ ಹೂಡಿದ್ದು, ಯತ್ನಾಳ ಹಾಗೂ ರಮೇಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಸಭೆ ನಡೆಸಿ, ಗುಪ್ತವಾಗಿಯೇ ಎಲ್ಲ ಅತೃಪ್ತ ನಾಯಕರನ್ನು ಸಂಘಟಿಸುವ ವೇದಿಕೆಯನ್ನು ಬೆಳಗಾವಿಯಲ್ಲೇ ರೆಡಿ ಮಾಡಲಾಗುತ್ತಿದೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಾಕ್ಷ ಬಿ.ವೈ ವಿಜಯೇಂದ್ರ ವಿರೋಧಿ ಬಣದ ನಾಯಕರು ಸಮಾಗಮಗೊಂಡಿದ್ದು ಬಿಜೆಪಿಯ ರೆಬಲ್ಸ್ ನಾಯಕರ ಮೀಟಿಂಗ್ ತೀವ್ರಕುತೂಹಲ ಮೂಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button