ಪ್ರಗತಿವಾಹಿನಿ ಸುದ್ದಿ: ಹೇಗಾದರು ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯಂದ್ರ ಅವರನ್ನು ಕೆಳಗೆ ಇಳಸಬೇಕು ಎಂದು ಪ್ಲಾನ್ ಮಾಡಿರುವ ಬಿಜೆಪಿ ರೆಬಲ್ ಟೇಮ್ ದೆಹಲಿ ತಲುಪಿದೆ. ರಾಜ್ಯದ ಪರಿಸ್ಥಿತಿಯ ಬಗ್ಗೆ ಹೈಕಮಾಂಡ್ ಗೆ ತಿಳಿಸಲು ಬಂದಿದ್ದೇವೆ ಎಂದು ರಮೇಶ್ ಜಾರಕಿಹೊಳಿ ದೇಹಲಿಯಲ್ಲಿ ಮಾತನಾಡಿದ್ದಾರೆ.
ರಾಜ್ಯದಲ್ಲಾಗುತ್ತಿರುವ ಅನ್ಯಾಯದಿಂದ ನಾವು ಬೇಸತ್ತು ಹೋರಾಟ ನಡೆಸಿದ್ದೇವೆ, ಇದೀಗ ರಾಜ್ಯದ ಪರಿಸ್ಥಿತಿಯ ಬಗ್ಗೆ ಹೈಕಮಾಂಡ್ ಗೆ ತಿಳಿಸಲು ಬಂದಿದ್ದೇವೆ. ಅಲ್ಲದೇ ಈಗಾಗಲೇ ಹೈಕಮಾಂಡ್ ಅನ್ನು ಭೇಟಿ ಮಾಡಿ ಪ್ರಮುಖ ಇಬ್ಬರು ನಾಯಕರ ಜೊತೆ ಮಾತುಕತೆ ನಡೆಸಿದ್ದೇವೆ, ಜೊತೆಗೆ ಎಲ್ಲಾ ಮಾಹಿತಿ ನೀಡಿದ್ದೇವೆ, ಹೈಕಮಾಂಡ್ ಯಾವುದೇ ತೀರ್ಮಾನ ನೀಡಿದರು ನಾವು ಸ್ವೀಕಾರ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದ್ದು, ಸದಾ ಬಿವೈ ವಿಜಯಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರೆಬಲ್ ಟೀಂ ಇದೀಗ ಹೈಕಮಾಂಡ್ ಭೇಟಿಯಾಗಿ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ