Belagavi NewsBelgaum NewsKannada NewsKarnataka NewsPolitics

*ಬಿಜೆಪಿಯಿಂದ ವಂದೇ ಮಾತರಂ ಗೀತೆಯ 150ನೇಯ ವರ್ಷಾಚರಣೆ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಗ್ರಾಮಾಂತರ ಜಿಲ್ಲಾ ಕಾರ್ಯಾಲಯದಲ್ಲಿ  ವಂದೇ ಮಾತರಂ ಗೀತೆಯ 150ನೇಯ ವರ್ಷಾಚರಣೆ ಕಾರ್ಯಕ್ರಮ ಉದ್ದೇಶಿಸಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯರಾದ  ಜಗದೀಶ ಹಿರೇಮನಿ ಅವರು, ಮಾತನಾಡಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು 1875 ರಲ್ಲಿ ವಂದೇ ಮಾತರಂ ಗೀತೆ ರಚಿಸಿದ್ದಾರೆ, ಈ ಗೀತೆಗೆ ಇದೀಗ  150ರ ಸಂಭ್ರಮ  ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ದೇಶಾದ್ಯಂತ ವಂದೇ ಮಾತರಂ ಗೀತೆಯ ವರ್ಷಾಚರಣೆ ನಡೆಯುತ್ತಿದೆ. 

ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ವಂದೇ ಮಾತರಂನ ಸಂಭ್ರಮ ನಡೆಯುತ್ತಿದೆ ಸ್ವಾತಂತ್ರ್ಯ ಸಂಗ್ರಾಮದ ಘೋಷವಾಕ್ಯವಾಗಿ ಈ ಗೀತೆಯನ್ನು ಬಳಸಲಾಗಿತ್ತು ಬ್ರಿಟಿಷರ ವಿರೋಧಿ ಚಳುವಳಿಗಳಲ್ಲಿ  ವಂದೇ ಮಾತರಂ ಘೋಷಣೆ ಕೂಗುತ್ತಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಮಾಜಿ ಶಾಸಕರಾದ  ಸಂಜಯ ಪಾಟೀಲ, ಅರವಿಂದ ಪಾಟೀಲ, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ , ಧನಶ್ರೀ ದೇಸಾಯಿ, ಸಂದೀಪ ದೇಶಪಾಂಡೆ , ಸಂತೋಷ ದೇಶನೂರ, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ , ಯಲ್ಲೇಶ್ ಕೋಲಕಾರ ,ಮಹಾಂತೇಶ ಚಿನ್ನಪ್ಪಗೌಡರ ಮಂಡಲ ಅದ್ಯಕ್ಷರಾದ , ಯುವರಾಜ ಜಾಧವ , ಶ್ರೀಕರ ಕುಲಕರ್ಣಿ, ಸುರೇಶ ದೇಸಾಯಿ , ಪ್ರವೀಣ ಮಾಳೆದವರ , ಚೇತನ ಪಾಟೀಲ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Home add -Advt

Related Articles

Back to top button