Karnataka News

*ಗುಡ್ದ ಕುಸಿತ: ಅವಶೇಷಗಳಡಿ ಸಿಲುಕಿ ನರಳಾಡುತ್ತಿದ್ದ ತಾಯಿ-ಮಗು ರಕ್ಷಣೆ*

ದುರಂತದಲ್ಲಿ ಅಜ್ಜಿ-ಮೊಮ್ಮಗ ಸಾವು


ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಉಳ್ಳಾಲದಲ್ಲಿ ಮನೆ ಮೇಲೆ ಗುಡ್ದ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿ ನರಳಾಡುತ್ತಿದ್ದ ಮಗು ಹಾಗೂ ತಾಯಿಯನ್ನು ರಕ್ಷಿಸಲಾಗಿದೆ.

ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಕಾಂತಪ್ಪ ಪೂಜಾರಿ ಎಂಬುವವರ ಮನೆ ಮೇಲೆ ಗುಡ್ಡ ಕುಸಿದು ಕುಟುಂಬದ ಐದು ಜನರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ಸತತ 10 ಗಂಟೆಗಳ ಕಾಲ ಎಸ್ ಡಿ ಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಾಯಿ ಅಶ್ವಿನಿ ಹಾಗೂ ಮಗು ಆರುಷ್ ನನ್ನು ರಕ್ಷಿಸಿದ್ದು, ಸುರಕ್ಷಿತವಾಗಿ ಹೊರತರಲಾಗಿದೆ.

ಗುಡ್ದ ಕುಸಿತದಲ್ಲಿ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮಾ ಪೂಜಾರಿ ಹಾಗೂ ಮೊಮ್ಮಗ ಮಹಿಳೆ ಅಶ್ವಿನಿಯ ಇನ್ನೋರ್ವ ಮಗ ಆರ್ಯನ್ ಮೃತಪಟ್ಟಿದ್ದಾರೆ. ಸದ್ಯ ರಕ್ಷಿಸಲ್ಪಟ್ಟಿರುವ ತಾಯಿ ಅಶ್ವಿನಿ ಹಾಗೂ ಆರುಷ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button