Kannada NewsKarnataka NewsLatest

ಮೋದಿ ಸುರಕ್ಷತೆಗೆ ಮೃತ್ಯುಂಜಯ ಜಪ, ಮಹಾಪೂಜೆ ಮಾಡಿದ ಬಿಜೆಪಿ ಮಹಿಳಾ ಮೋರ್ಚಾ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸುರಕ್ಷತೆಗೆ ಪ್ರಾರ್ಥಿಸಿ  ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಮೃತ್ಯುಂಜಯ ಜಪ ಮತ್ತು ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

ಇದಕ್ಕೂ ಮುನ್ನ, ಪಂಜಾಬ್‌ನಲ್ಲಿ ಕಾಂಗ್ರೆಸ್ ದುರಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ, ಬೆಳಗಾವಿಯಲ್ಲಿ  ಮಹಿಳಾ ಮೋರ್ಚಾ ಸದಸ್ಯರನ್ನೂ ಬಂಧಿಸಲಾಯಿತು.

ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು,  ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪಂಜಾಬ್ ಸರ್ಕಾರವು ಸಮಾಜ ವಿರೋಧಿ ಶಕ್ತಿಗಳನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಕಾರಣ ಪ್ರಧಾನಿ ಮೋದಿ ಸುಮಾರು  20 ನಿಮಿಷಗಳ ಕಾಲ ರಸ್ತೆಯಲ್ಲಿ ಸಿಲುಕಿಕೊಂಡಿರುವುದು  ದೇಶದ ಇತಿಹಾಸದಲ್ಲಿ ಕರಾಳ ದಿನವಾಗಿದೆ.  ರಾಜಕೀಯ ಲಾಭಕ್ಕಾಗಿ ರಾಜ್ಯ ಸರ್ಕಾರವು ದೇಶದ ಪ್ರಧಾನಿಯ ಭದ್ರತೆಯನ್ನು ನಿರ್ಲಕ್ಷಿಸಿತು. ಅವರ ಜೀವವವನ್ನು ಗಂಭೀರ ಅಪಾಯಕ್ಕೆ ತಳ್ಳಿತು ಎಂದು ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಹೇಳಿದರು.

ಪಿತೂರಿ

“ಇದರ ಹಿಂದೆ ಪಿತೂರಿ ಇರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಮತ್ತು ಅದನ್ನು ಸೂಕ್ಷ್ಮವಾದ  ತನಿಖೆ ಮಾಡಬೇಕಾಗಿದೆ.  ರಾಜ್ಯ ಸರ್ಕಾರದ ಉದ್ದೇಶಪೂರ್ವಕ ಮತ್ತು ಕ್ರಿಮಿನಲ್ ನಿರ್ಲಕ್ಷ್ಯದ ಲಕ್ಷಣ ಕಾಣುತ್ತಿದೆ ಎಂದು ಸರ್ನೋಬತ್ ಆರೋಪಿಸಿದ್ದಾರೆ.

ಡಾ.ಸೋನಾಲಿ ಸರ್ನೋಬತ್, ಭಾಗ್ಯಶ್ರೀ ಕೋಕಿತ್ಕರ್, ಮತ್ತು ಗ್ರಾಮೀಣ ಮಹಿಳಾ ಮೋರ್ಚಾ ಸದಸ್ಯರು ಚನ್ನಮ್ಮ ವೃತ್ತದ ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ ಒಳಿತಿಗಾಗಿ ಪ್ರಾರ್ಥಿಸಿದರು.
ಮೋದಿಯವರ ಶ್ರೇಯೋಭಿವೃದ್ಧಿಗಾಗಿ ಮಹಾಮೃತ್ಯುಂಜಯ ಜಪವನ್ನುಹಮ್ಮಿಕೊಳ್ಳಲಾಗಿದೆ.
ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರದ ಲೋಪವನ್ನು ಡಾ ಸೋನಾಲಿ ಖಂಡಿಸಿದ್ದಾರೆ.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸೇರದೆ ಸಾಮಾಜಿಕ ಅಂತರದಿಂದ ಪ್ರಾರ್ಥನೆಗಳನ್ನು ಮಾಡಲಾಯಿತು. ಅಲ್ಲದೆ ಕೆಲವು ಮಹಿಳೆಯರು ಬಂಧನಕ್ಕೊಳಗಾಗಿದ್ದರು.

ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಭದ್ರತಾ ಲೋಪ: ಸರಕಾರ ವಜಾ ಮಾಡಲು ಮುಖ್ಯಮಂತ್ರಿ ಬೊಮ್ಮಾಯಿ ಆಗ್ರಹ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button