ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರೌಡಿಶೀಟರ್ ಗಳು ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ರೌಡಿ ರಾಜಕೀಯ ಕೆಸರೆರಚಾಟ ಆರಂಭವಾಗಿದ್ದು, ಆಡಳಿತ-ವಿಪಕ್ಷ ನಾಯಕರ ನಡಿವೆ ವಾಕ್ಸಮರ ತಾರಕಕ್ಕೇರಿದೆ.
ರೌಡಿಶೀಟರ್ ಗಳು ಬಿಜೆಪಿ ಸೇರ್ಪಡೆ ವಿಚಾರವಾಗಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ, ಆರ್ ಎಸ್ ಎಸ್ ನವರದ್ದು ಬರಿ ಇಂತದ್ದೇ. ಅಶಾಂತಿ ನಿರ್ಮಿಸಲು ಅವರಿಗೆ ಇವರೆಲ್ಲ ಬೇಕಲ್ಲಾ. ಬಿಜೆಪಿಯವರು ಹೇಳುವುದು ಒಂದು, ಮಾಡುವುದು ಒಂದು. ಬದನೆಕಾಯಿ ನೀತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾಪತ್ತೆಯಾದ ರೌಡಿಗಳು ಬಿಜೆಪಿ ನಾಯಕರ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಪಿಗಳ ಜೊತೆ ರೌಡಿಶೀಟರ್ ಗಳು ಇರುವಾಗ ಪೊಲೀಸರು ಹೇಗೆ ಅವರನ್ನು ಹಿಡಿಯುತ್ತಾರೆ? ಖಾಕಿಗಳಿಗೆ ಅವನನ್ನು ಹಿಡಿಯಲು ಧೈರ್ಯ ಬರುತ್ತದೆಯೇ? ಬಿಜೆಪಿಯವರು ರೌಡಿಗಳ ಜೊತೆ ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಸ್ವತ: ಸಂಸದರುಗಳೇ ಆತನ ಜೊತೆಗಿದ್ದಾಗ ಪೊಲೀಸರು ಹೇಗೆ ಅರೆಸ್ಟ್ ಮಾಡುತ್ತಾರೆ? ಹೇಗೆ ಕ್ರಮ ಕೈಗೊಳ್ಳುತ್ತಾರೆ? ಬಿಜೆಪಿಯವರು ಹೇಳುವ ನೀತಿ ಇದೇನಾ? ಏನು ಬದನೆಕಾಯಿ ನೀತಿ ಅವರದ್ದು ಎಂದು ಗುಡುಗಿದ್ದಾರೆ.
ಬಿಜೆಪಿಯ ಇಬ್ಬರು ಎಂಪಿಗಳು ಸರ್ಚ್ ವಾರೆಂಟ್ ಇರುವವನ ಜೊತೆಇದ್ದಾರೆ. ಇದು ಯಾವ ನೀತಿ? ಈ ಬಗ್ಗೆ ಕೇಳಿದರೆ ಬಿಜೆಪಿ ನಾಯಕರು ಕಾಂಗ್ರೆಸ್ ನಲ್ಲಿ ಇಲ್ವಾ? ಎಂದು ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ. ಸೈಲೆಂಟ್ ಸುನೀಲ ಅನ್ನೋನು ಎಲ್ಲರಿಗೂ ಗೊತ್ತಿರುವ ರೌಡಿ. ಫೈಟರ್ ರವಿಯನ್ನೂ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಮೊದಲು ಆತನ ಹಿನ್ನೆಲೆ ನೋಡಿ. ಇದನ್ನು ಪ್ರಶ್ನೆ ಮಾಡಿದ್ರೆ ಕಾಂಗ್ರೆಸ್ ನಲ್ಲಿಯೂ ಇದ್ದಾರೆ ಅಂತ ನಮ್ಮ ಕಡೆಗೆ ಆರೋಪ ಮಾಡ್ತಾರೆ. ಬಿಜೆಪಿಯವರಿಗೆ ಇದೊಂದು ಅಂಟುರೋಗ ಆಗಿದೆ. ಸಿಎಂ ಬೊಮ್ಮಾಯಿ ಅವರು ಎಲ್ಲದಕ್ಕೂ ಹಿಂದಿನ ಸರ್ಕಾರದಲ್ಲಿಯೂ ಇತ್ತು ಈಗ ನಮ್ಮ ಸರ್ಕಾರದ ಬಗ್ಗೆ ಯಾಕೆ ಹೇಳ್ತೀರಾ ಅಂತಾರೆ ಸರ್ಕಾರದ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಿ ಎಂದರೆ ಕಾಂಗ್ರೆಸ್ ಅವಧಿಯಲೂ ಇತ್ತು ಎಂದು ಹೇಳುವುದು ಮೊಂಡುತನ ಅಲ್ಲದೇ ಇನ್ನೇನು? ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿದ್ದರು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಮಿತ್ ಶಾ ಎಲ್ಲಿಗೆ ಹೋಗಿದ್ರು? ಮೊದಲು ಈ ಬಗ್ಗೆ ಹೇಳಲಿ. ಅಮಿತ್ ಶಾ ಮಾವನ ಮನೆಗೆ ಹೋಗಿದ್ರಾ? ಅಮಿತ್ ಶಾ ಅವರಿಗೆ 3 ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿತ್ತು. ಅಂತಹ ವ್ಯಕ್ತಿಯೇ ಬಿಜೆಪಿ ಅಧ್ಯಕ್ಷ, ಹೋಮ್ ಮಿನಿಸ್ಟರ್ ಆಗಿದ್ದಾರೆ. ಈಗ ನಲಪಾಡ್ ಬಗ್ಗೆ ಹೇಳುತ್ತಿದ್ದಾರೆ. ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಇದೆ. ಆದರೆ ರೌಡಿಶೀಟರ್ ಅಲ್ಲ. ರೌಡಿಶೀಟರ್ ನಲ್ಲಿ ಅವರ ಹೆಸರಿದೆಯಾ? ಫೈಟರ್ ರವಿ ಹೆಸರು ಹೇಗಿದೆ ಅಂತ ನೋಡಿ. ಬಿಜೆಪಿ,ಆರ್ ಎಸ್ ಎಸ್ ನವರು ಇಂತದ್ದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಲು ಅವರಿಗೆ ಇಂತವರೆಲ್ಲ ಬೇಕು. ಹಾಗಾಗಿ ಪಕ್ಷಕ್ಕೆ ಸೇರಿಸಿಕೊಳ್ತಿದ್ದಾರೆ. ಬಿಜೆಪಿಯವರದ್ದು ಮೊಂಡುತನ ಮಾತ್ರವಲ್ಲ ಭಂಡತನ. ಮಾನ ಮರ್ಯಾದೆ ಇಲ್ಲದಿದ್ದರೆ ಹೀಗೆ ಆಗೋಗೂ ಎಂದು ಕಿಡಿಕಾರಿದ್ದಾರೆ.
BJP ವಾಷಿಂಗ್ ಮಷಿನ್ ಇದ್ದ ಹಾಗೆ; ಪಕ್ಷಕ್ಕೆ ಸೇರಿದರೆ ಪಾಪಿಗಳು ಪಾವನರಾಗ್ತಾರೆ
https://pragati.taskdun.com/rowdysheeterbjp-programmepriyank-khargeattack/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ