Politics

*ಕದ್ದ ಕಾರು ಮಾರ್ಗ ಮಧ್ಯೆಯೇ ಬಿಟ್ಟು ಹೋದ ಕಳ್ಳ: ದೆಹಲಿ ಕಳ್ಳರಿಗೂ ಮಾದರಿಯಾಯ್ತು ಸಿಎಂ ಸಿದ್ದರಾಮಯ್ಯ ನಡೆ: ಬಿಜೆಪಿ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ: ಕಳ್ಳನೊಬ್ಬ ತನ್ನ ತಪ್ಪಿನ ಅರಿವಾಗಿ ಮಾರ್ಗ ಮಧ್ಯೆಯೇ ಕದ್ದ ಕಾರು ಬಿಟ್ಟು, ಕಾರಿನ ವಿಂಡ್ ಸ್ಕ್ರೀನ್ ಗೆ ಕ್ಷಮಾಪಣ ಪತ್ರ ಬರೆದು ಅಂಟಿಸಿ ಹೋಗಿರುವ ಘಟನೆ ಎಲ್ಲೆಡೆ ಸುದ್ದಿಯಾಗಿದೆ. ಇದೇ ವಿಚಾರವಾಗಿ ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರ ಕಾಲೆಳೆದು ಟೀಕಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮುಡಾ ಹಗರಣ ಹಾಗೂ ಸಿದ್ಧಾರ್ಥ್ ವಿಹಾರ ಭೂಮಿ ಹಗರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ರಾಜ್ಯ ಬಿಜೆಪಿ, ದೆಹಲಿಯ ಕಳ್ಳರಿಗೂ ಮಾದರಿಯಾಯಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಎಂದು ವ್ಯಂಗ್ಯವಾಡಿದೆ.

ಸಿದ್ದರಾಮಯ್ಯ, ಖರ್ಗೆ ಅವರು ಅಕ್ರಮವಾಗಿ ಪಡೆದ ಸೈಟ್ ವಾಪಸ್ ನೀಡಿದ ಮಾದರಿಯಲ್ಲಿಯೇ, ಕಳ್ಳತನದಿಂದ ಕದ್ದ ಕಾರನ್ನು ಅರ್ಧದಲ್ಲೇ ಬಿಟ್ಟು ಕ್ಷಮಾಪಣಾ ಪತ್ರ ಅಂಟಿಸಿರುವ ಕಳ್ಳರು ರಾಜ್ಯದ ಮುಖ್ಯಮಂತ್ರಿಗಳ ಮಾದರಿಯನ್ನು ಅನುಸರಿಸಿದ ಅಪರೂಪದ ಘಟನೆ ನಡೆದಿದೆ.

Home add -Advt

ಈ ರೀತಿ ಕದ್ದ ಮಾಲನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿ “ಕಾಂಗ್ರೆಸ್ ಮಾದರಿ”ಯನ್ನು ಅನುಸರಿಸುವ ಕಳ್ಳರಿಗೆ “ಪ್ರಾಮಾಣಿಕ ಕಳ್ಳ” ಎಂಬ ರಾಜ್ಯ ಪ್ರಶಸ್ತಿ ಘೋಷಿಸಿದರೂ ಅಚ್ಚರಿಯಿಲ್ಲ ಎಂದು ಟಾಂಗ್ ನೀಡಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button