ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಕಣಕುಂಬಿಯ ಮೌಳಿದೇವಿ ಪ್ರೌಢಶಾಲೆಯಲ್ಲಿ ನಿಯತಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.
ನಿಯತಿ ಫೌಂಡೇಶನ್‌ನ ಅಧ್ಯಕ್ಷೆ ಹಾಗೂ ಖಾನಾಪುರದ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್, ಡಾ ಸ್ಪರ್ಶ್ ಅಗರವಾಲ್ ಅವರೊಂದಿಗೆ ಎಲ್ಲಾ ವಯೋಮಾನದವರಿಗೆ ಈ ಸಂಪೂರ್ಣ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದರು.
ಈ ವೇಳೆ ಡಾ ಸೋನಾಲಿ ಸರ್ನೋಬತ್ ಅವರು ಸಾಮಾಜಿಕ, ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆ ಕುರಿತು ಮಾತನಾಡಿದರು. ಅವರು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಸಮಾಜಕ್ಕೆ ಅವರ ಅದ್ಭುತ ಕೊಡುಗೆಯ ಬಗ್ಗೆ ವಿವರಿಸಿದರು.
ಡಾ ಸ್ಪರ್ಶ್ ಅಗರ್ವಾಲ್ ಆರೋಗ್ಯ ಮತ್ತು ನಿರ್ವಹಣೆ ಕುರಿತು ಮಾತನಾಡಿದರು. ಬಿಜೆಪಿ ಕಾರ್ಯಕರ್ತ ಅರ್ಜುನ್ ಗಾವಡೆ, ಅನಂತ್ ಗಾವಡೆ, ಅನಂತ್ ಗಾವಡೆ (ಬೆಟ್ನೆ) ಸಕಲ ವ್ಯವಸ್ಥೆ ಮಾಡಿದ್ದರು.
ವಿದ್ಯಾರ್ಥಿನಿಯರು ಭಕ್ತಿಗೀತೆ ಪ್ರಸ್ತುತಪಡಿಸಿದರು. ಮುಖ್ಯಶಿಕ್ಷಕ ಶ್ರೀ ಚಿಗುಳಕರ ಸ್ವಾಗತಿಸಿದರು.
ನಿಯತಿ ಫೌಂಡೇಶನ್ ಮತ್ತು ಡಾ ಸ್ಪರ್ಶ್ ಅಗರವಾಲ್ ಅವರು ಉಚಿತ ಆರೋಗ್ಯ ಸೇವೆ ಮತ್ತು ಉಚಿತ ಔಷಧಿಗಳನ್ನು ಒದಗಿಸಲಾಯಿತು. ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಆರೋಗ್ಯ ಶಿಬಿರದ ಪ್ರಯೋಜನ ಪಡೆದರು.
ಬಿಜೆಪಿ ಕಾರ್ಯಕರ್ತರಾದ ಬಾಳೇಶ ಚವ್ವನವರ, ಪರಶುರಾಮ ಕೋಲ್ಕಾರ, ವಿನೋದ ಪಾವಲೆ ಉಪಸ್ಥಿತರಿದ್ದರು.
ಮಹಿಳಾ ಸ್ವಸಹಾಯ ಗುಂಪುಗಳು, ಸಾತೇರಿ ಸಂಘ, ವೈಷ್ಣವಿ ಸಂಘ, ಜಯ ಜಿಜೌ ಸಂಘ, ಆನಂದಿ ಸಂಘ, ಸಿದ್ಧೇಶ್ವರ ಸಂಘಗಳ ಪದಾಧಿಕಾರಿಗಳನ್ನು ಡಾ.ಸೋನಾಲಿ ಸರ್ನೋಬತ್ ಸನ್ಮಾನಿಸಿದರು.
ಈ ಕಾರ್ಯಕ್ರಮದ ಮುನ್ನಾ ದಿನ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಡುಗೆ ಸಿಲಿಂಡರ್ ಸ್ಫೋಟ; ಇಬ್ಬರಿಗೆ ಗಂಭೀರ ಗಾಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ