Kannada NewsKarnataka NewsLatest

*ನೀರು ಕೇಳಿದ ರೈತರ ಮೇಲೆ ಲಾಠಿ ಚಾರ್ಜ್; ಅನ್ನದಾತರ ಮೇಲೆ ಪೊಲೀಸ್ ಕೇಸ್ ಹಾಕಿದ್ದನ್ನು ಜನ ಮರೆತಿಲ್ಲ; ಟ್ವೀಟ್ ಮೂಲಕ ಕುಟುಕಿದ ಬಿಜೆಪಿ*

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯನವರೇ ತಾವು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕರ್ನಾಟಕದ ರೈತರು ಪ್ರತಿಭಟನೆ ಮಾಡಿದ್ದಾಗ ತಮ್ಮ ಸರ್ಕಾರ ಪೊಲೀಸರನ್ನು ಹಳ್ಳಿ ಹಳ್ಳಿಗೆ ಕಳಿಸಿ ರೈತರ ಮೇಲೆ ಲಾಠಿ ಬೀಸಿದ್ದನ್ನು ರಾಜ್ಯದ ಜನ ಮರೆತಿಲ್ಲ ಎಂದು ರಾಜ್ಯ ಬಿಜೆಪಿ ಸಿಎಂ ವಿರುದ್ಧ ಕಿಡಿಕಾರಿದೆ.

ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಾಗ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದನ್ನ ಮರೆತಿಲ್ಲ. ಇತ್ತೀಚೆಗೆ ತಮ್ಮ ಮಂತ್ರಿಗಳು, ಪರಿಹಾರಕ್ಕೋಸ್ಕರ, ಸಾಲ ಮನ್ನಾ ಆಗುತ್ತದೆ ಎನ್ನುವ ಆಸೆಯಿಂದ ಬರ ಬರಲಿ ಎಂದು ಆಶಿಸುತ್ತಾರೆ ಎಂದು ಅನ್ನದಾತರನ್ನು ಅವಮಾನಿಸಿದ್ದನ್ನು ಜನ ಮರೆತಿಲ್ಲ.

ತಮ್ಮ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು “ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ?” ಎಂದು ನಿಂದಿಸಿದ್ದನ್ನೂ ಜನ ಮರೆತಿಲ್ಲ ಎಂದು ಟ್ವೀಟ್ ಮಾಡಿ ಸಿಎಂ ಲಾಠಿ ಹಿಡಿದು ನಿಂತ ರೀತಿಯಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದೆ.

ಈಗ ಚುನಾವಣೆ ಹೊಸ್ತಿಲಲ್ಲಿರುವಾಗ ದಿಢೀರನೆ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ತಮ್ಮ ನಾಟಕವನ್ನು ಕರ್ನಾಟಕದ ರೈತರು ನಂಬುತ್ತರೆಯೇ? ನಿಮ್ಮ ನಾಟಕ ಸಾಕು ಮಾಡಿ ಮೊದಲು ರೈತರಿಗೆ ಬರ ಪರಿಹಾರ ಕೊಡುವತ್ತ ಗಮನ ಹರಿಸಿ ಎಂದು ಆಗ್ರಹಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button