*ಬಿಜೆಪಿಯಲ್ಲಿ ನಿಲ್ಲದ ಹೊಂದಾಣಿಕೆ ಪಾಲಿಟಿಕ್ಸ್ ಗಲಾಟೆ; ಬಾಗಲಕೋಟೆ ಸಭೆಯಲ್ಲಿಯೂ ಗದ್ದಲ-ಕೋಲಾಹಲ*
ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಬಿಜೆಪಿಯಲ್ಲಿ ಸ್ವಪಕ್ಷದ ನಾಯಕರ ವಿರುದ್ಧ ಪಕ್ಷದ ಕಾರ್ಯಕರ್ತರು ಹೊಂದಾಣಿಕೆ ರಾಜಕೀಯ ಆರೋಪ ಮಾಡುತ್ತಿದ್ದು, ಜಿಲ್ಲೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಯಲ್ಲಿ ಬಹಿರಂಗವಾಗಿಯೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಗಲಾಟೆ ನಡೆದಿತ್ತು. ಇದೀಗ ಬಾಗಲಕೋಟೆಯಲ್ಲಿ ನಡೆದಿರುವ ಸಭೆಯಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ.
ಬಾಗಲಕೋಟೆಯಲ್ಲಿ ಜಿಲ್ಲಾ ಬಿಜೆಪಿ ಸಭೆಯಲ್ಲಿ ಕಾರ್ಯಕರ್ತರು ನಾಯಕರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡರ ಎರಡು ಬಣಗಳ ನಡುವೆ ವಾಗ್ವಾದ ನಡೆದಿದೆ. ಬಿಜೆಪಿಯಲ್ಲಿರುವ ಪಕ್ಷ ವಿರೋಧಿಗಳನ್ನು ಹೊರ ಹಾಕುವಂತೆ ಆಗ್ರಹಿಸಿದ್ದಾರೆ.
ಎಂ ಎಲ್ ಸಿ ಪಿ.ಹೆಚ್.ಪೂಜಾರ್, ಚರಂತಿಮಠ ಬಣದ ನಡುವೆ ಗಲಾಟೆಯಾಗಿದೆ. ಕೆಸನೂರು ಶಂಭುಗೌಡ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಇಬ್ಬರನ್ನೂ ಎಂ ಎಲ್ ಸಿ ಪೂಜಾರ್ ಬೆಂಬಲಿಗರು ಸಭೆಯಿಂದ ಹೊರಹಾಕಿದ್ದಾರೆ. ಪೂಜಾರ್ ಬೆಂಬಲಿಗ ಶೇಖರ್ ಮಾನೆಯನ್ನು ಸಭೆಯಿಂದ ಹೊರ ಕಳುಹಿಸುವವರೆಗೂ ಗಲಾಟೆ ಮಾಡಿದ್ದು, ಶೇಖರ್ ಮಾನೆಯನ್ನಿ ಸಭೆಯಿಂದ ಹೊರಕಳುಹಿಸಿದ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ