Latest

ಬಿಜೆಪಿಯಿಂದ ಕರಾಳ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಬಿಜೆಪಿ-ಕರ್ನಾಟಕ ಮತ್ತು ಲೋಕತಂತ್ರ ಸೇನಾನಿ ಆ್ಯಕ್ಶನ್ ಕಮಿಟಿ – ಕರ್ನಾಟಕ ವತಿಯಿಂದ   ಜಗನ್ನಾಥ ಭವನದಲ್ಲಿ ಇಂದು 1975 ಜೂನ್ 25ರಂದು ದೇಶದಲ್ಲಿ ತುರ್ತುಸ್ಥಿತಿ ಹೇರಿದ ಕರಾಳ ದಿನಾಚರಣೆ ಆಯೋಜಿಸಲಾಗಿತ್ತು.

ರಾಜ್ಯ ಬಿಜೆಪಿ ಅಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸಿ, ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ   ಎನ್.ರವಿಕುಮಾರ್, ಲೋಕತಂತ್ರ ಸೇನಾನಿ ಆ್ಯಕ್ಶನ್ ಕಮಿಟಿ ರಾಜ್ಯ ಅಧ್ಯಕ್ಷ  ಮಂಜುನಾಥ ಸ್ವಾಮಿ,  ರಾಜ್ಯ ಬಿಜೆಪಿ ವಕ್ತಾರ  ಗೋ.ಮಧುಸೂದನ್, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ   ಬಿ.ವೈ.ವಿಜಯೇಂದ್ರ , ಬಿಜೆಪಿ ಮುಖಂಡ  ಛಾಯಪತಿ,  ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ   ಗಣೇಶ ಯಾಜಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ  ಭಾರತಿ ಶೆಟ್ಟಿ ಹಾಗೂ ತುರ್ತುಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ ಪ್ರಮುಖ ಹಿರಿಯರು ಉಪಸ್ಥಿತರಿದ್ದರು.

Home add -Advt

Related Articles

Back to top button